Select Your Language

Notifications

webdunia
webdunia
webdunia
webdunia

ಮಲಮಗಳನ್ನು ಅತ್ಯಾಚಾರ ಮಾಡಿಸಿ, ಆಸಿಡ್ ಸುರಿದು ಸುಟ್ಟು ಹಾಕಿದ ಮಲತಾಯಿ!

ಮಲಮಗಳನ್ನು ಅತ್ಯಾಚಾರ ಮಾಡಿಸಿ, ಆಸಿಡ್ ಸುರಿದು ಸುಟ್ಟು ಹಾಕಿದ ಮಲತಾಯಿ!
ನವದೆಹಲಿ , ಬುಧವಾರ, 5 ಸೆಪ್ಟಂಬರ್ 2018 (10:29 IST)
ನವದೆಹಲಿ: ಮಲತಾಯಿ ಯಾವತ್ತಿದ್ದರೂ ಮಲತಾಯಿಯೇ ಎನ್ನುವ ಮಾತನ್ನು ಈ ಪಾಪಿ ಮಹಿಳೆ ನಿಜ ಮಾಡಿದ್ದಾಳೆ. ತನ್ನ ಗಂಡನ ಇನ್ನೊಬ್ಬ ಪತ್ನಿಯ ಮಗಳಿಗೆ ಈಕೆ ನೀಡಿದ ಚಿತ್ರಹಿಂಸೆ ನೋಡಿದರೆ ಕರುಳು ಕಿತ್ತು ಬರುವಂತಿದೆ.

ಇದು ನಡೆದಿರುವುದು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ. ಮಲತಾಯಿಯೊಬ್ಬಳು ತನ್ನ ಗಂಡನ ಇನ್ನೊಬ್ಬ ಪತ್ನಿಯ 9 ವರ್ಷದ ಮಗಳಿಗೆ ತನ್ನ ಪುತ್ರನ ಸಹಾಯದಿಂದ ಸಾಮೂಹಿಕ ಅತ್ಯಾಚಾರ ಮಾಡಿಸಿ ಆಕೆಯ ಕಣ್ಣು ಕಿತ್ತಿದ್ದಲ್ಲದೆ, ಆಸಿಡ್‍ ಸುರಿದು ಕೊಲೆ ಮಾಡಿದ್ದಲ್ಲದೆ, ಮೃತದೇಹವನ್ನು ಕಾಡಿಗೆ ಎಸೆದಿದ್ದಾಳೆ.

ಈಕೆ ಇಷ್ಟೊಂದು ಹಿಂಸೆ ನೀಡಿ ಕೊಲೆ ಮಾಡಲು ಕಾರಣವೆಂದರೆ ಆರೋಪಿ ಮಹಿಳೆಗೆ ತನ್ನ ಗಂಡ ತನ್ನ ಇನ್ನೊಬ್ಬ ಪತ್ನಿ ಮತ್ತು ಮಕ್ಕಳ ಮೇಲೆ ಹೆಚ್ಚು ಅಕ್ಕರೆ ವಹಿಸುತ್ತಾನೆ ಎಂಬ ಕೋಪವಂತೆ! ಇದೀಗ ಪೊಲೀಸರು ಆರೋಪಿ ಮಹಿಳೆ, ಆಕೆಯ ಪುತ್ರನನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಚಂದನ್ ಶೆಟ್ಟಿ ಹಾಡಿನ ವಿವಾದ ಕೊನೆಗೂ ಅಂತ್ಯ