Select Your Language

Notifications

webdunia
webdunia
webdunia
webdunia

ಅಜ್ಜಿಯ ಮೇಲೆ ಅತ್ಯಾಚಾರ ಎಸಗಿದ 23 ವರ್ಷದ ಯುವಕ

ಅಜ್ಜಿಯ ಮೇಲೆ ಅತ್ಯಾಚಾರ ಎಸಗಿದ 23 ವರ್ಷದ ಯುವಕ
ಗಜಿಯಾಬಾದ್ , ಬುಧವಾರ, 5 ಸೆಪ್ಟಂಬರ್ 2018 (10:09 IST)
ಗಜಿಯಾಬಾದ್ : ಕಾಮುಕರು ತಮ್ಮ ಕಾಮ ತೃಷೆಯನ್ನು ತೀರಿಸಿಕೊಳ್ಳಲು ಚಿಕ್ಕ ಮಕ್ಕಳು, ಯುವತಿಯರ ಮೇಲೆ ದೌರ್ಜನ್ಯ ಎಸಗುತ್ತಿರುವುದು ಮಾತ್ರವಲ್ಲ ವಯಸ್ಸಾದ ವೃದ್ದೆಯರ ಮೇಲೂ ದುಷ್ಕೃತ್ಯವನ್ನು ಎಸಗುತ್ತಿದ್ದಾರೆ. ಅಂತಹದೊಂದು ಘಟನೆ ಇದೀಗ ಟ್ರೋನಿಕಾ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಹೌದು. 82 ವರ್ಷದ ಮಹಿಳೆ ಮೇಲೆ 23 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಸಂತ್ರಸ್ತೆಯ ಕುಟುಂಬದವರು ಅತ್ಯಾಚಾರದ ದೂರು ದಾಖಲಿಸಿರುವ ಹಿನ್ನಲೆಯಲ್ಲಿ ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.


ಆರೋಪಿ ಹಾಗು ಮಹಿಳೆ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದು, ಕಟ್ಟಡದ ನೆಲ ಮಹಡಿಯಲ್ಲಿ ವೃದ್ಧೆ ತನ್ನ ಮೊಮ್ಮಕ್ಕಳೊಂದಿಗೆ ಇದ್ದರೆ ಆರೋಪಿ ಕಟ್ಟಡದ ಇನ್ನೊಂದು ಮಗ್ಗುಲಲ್ಲಿ ವಾಸವಾಗಿದ್ದ. ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಅಜ್ಜಿಯ ಮನೆಗೆ ನುಗ್ಗಿದ ಆರೋಪಿ ನಿದ್ರಿಸುತ್ತಿದ್ದವಳ ಮೇಲೆ ಎರಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಮನಸ್ಸಿಲ್ಲ ಎಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್