Publish Date: Mon, 03 Sep 2018 (12:13 IST)
Updated Date: Mon, 03 Sep 2018 (12:15 IST)
ಚೆನ್ನೈ : ಚೆನ್ನೈನ ಅಯನಾವರಂನಲ್ಲಿ ಅಪ್ರಾಪ್ತ ಹುಡುಗಿಯ ಮೇಲೆ ಗ್ಯಾಂಗ್ ರೇಪ್ ನಡೆದ ಘಟನೆಯಿಂದ ಜನ ಚೇತರಿಸಿಕೊಳ್ಳುವ ಮೊದಲೇ ಪುದುಚೇರಿಯಲ್ಲಿ 17 ವರ್ಷ ವಯಸ್ಸಿನ ಹುಡುಗಿಯ ಮೇಲೆ 8 ಜನ ಕಾಮುಕರು ಅತ್ಯಾಚಾರ ಎಸಗಿದ ಮತ್ತೊಂದು ಘಟನೆ ವರದಿಯಾಗಿದೆ.
ಪುದುಚೆರಿಯಲ್ಲಿರುವ ರೆಡಿಯಾರ್ಪಾಲಾಯಂ ನಿಂದ ಬಂದ ಬಾಲಕಿಯೊಬ್ಬಳು ವಿಲುಪ್ಪುರಮ್ ನಲ್ಲಿರುವ ತನ್ನ ಅಜ್ಜಿಯ ಮನೆಗೆ ಹೋಗುತ್ತಿದ್ದಾಗ ದಾರಿ ಮಧ್ಯದಲ್ಲಿ ಆಕೆಗೆ ಪರಿಚಯವಿರುವ ವಿಕ್ಕಿ ಎಂಬಾತ ಸಿಕ್ಕಿದ್ದು, ಆತ ಬಾಲಕಿಯನ್ನು ಒಂಟಿ ಮನೆಯೊಂದಕ್ಕೆ ಕರೆದೊಯ್ದು ಮತ್ತು ಬರುವ ಔಷಧ ನೀಡಿ ತನ್ನ 7 ಜನ ಸ್ನೇಹಿತರ ಜೊತೆ ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ನಂತರ ಈ ಘಟನೆಯ ಬಗ್ಗೆ ಬಾಲಕಿ ತನ್ನ ಹೆತ್ತವರಿಗೆ ತಿಳಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿಯ ಹೇಳಿಕೆ ಮೇಲೆ ವಿಕಿ, ಮುಗಿಲನ್, ಆರ್ ಸೂರ್ಯ, ಕಲಾಯ್, ಕಣ್ಣದಾಸನ್, ದೇವ, ಅಶೋಕ್, ಜಿ ಸೂರ್ಯ ವಿರುದ್ಧ ಲೈಂಗಿಕ ದೌರ್ಜನ್ಯ ಕಾಯ್ದೆ ಅಡಿ ತಿರುವಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.