Select Your Language

Notifications

webdunia
webdunia
webdunia
webdunia

ಸಂಭ್ರಮಾಚರಣೆ ವೇಳೆ ಅಭ್ಯರ್ಥಿ ಬೆಂಬಲಿಗನ ಮೇಲೆ ಹಲ್ಲೆ

ಸಂಭ್ರಮಾಚರಣೆ ವೇಳೆ ಅಭ್ಯರ್ಥಿ ಬೆಂಬಲಿಗನ ಮೇಲೆ ಹಲ್ಲೆ
ಚಿಕ್ಕೋಡಿ , ಸೋಮವಾರ, 3 ಸೆಪ್ಟಂಬರ್ 2018 (19:07 IST)
ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿರುವಂತೆ ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ವಿಜಯೋತ್ಸವ, ಸಂಭ್ರಮಾಚರಣೆ ಆಚರಿಸುತ್ತಾರೆ. ಸಂಭ್ರಮಾಚರಣೆ ವೇಳೆ ಅಭ್ಯರ್ಥಿಯ ಬೆಂಬಲಿಗನ ಮೇಲೆ ಹಲ್ಲೆ ನಡೆದಿದೆ.

ಸಂಭ್ರಮಾಚರಣೆ ನಡೆಸುವ ವೇಳೆ ಅಭ್ಯರ್ಥಿಯ ಬೆಂಬಲಿಗನ ಮೇಲೆ ಹಲ್ಲೆ ನಡೆದಿದೆ. ಚಿಕ್ಕೋಡಿ ಪಟ್ಟಣದ ವಾರ್ಡ್ ನಂ 08 ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇರ್ಫಾನ್ ಬೇಪಾರಿ ಬೆಂಬಲಿಗನ ಮೇಲೆ ಹಲ್ಲೆ ನಡೆದಿದೆ. ಸೋಹೆಲ್ ಬೇಪಾರಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದು, ಈತನ ಮೇಲೆ ಹಲ್ಲೆಯಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ವಿರೋಧಿ ಬಣದ ಅಸ್ಲಂ ಬೇಪಾರಿ ಬೆಂಬಲಿಗರಿಂದ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.  ಹಲ್ಲೆ ಮಾಡಿದ ಪರಿಣಾಮ ಸೋಹೆಲ್ ಕಿವಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೆಚ್ಚಿನ ಪೋಲಿಸರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ.






Share this Story:

Follow Webdunia kannada

ಮುಂದಿನ ಸುದ್ದಿ

ಲೋಕಲ್ ಫೈಟ್: ಕಲಬುರಗಿಯಲ್ಲಿ ಖರ್ಗೆ ಕೈಮೇಲು- ಗುತ್ತೇದಾರ್ ಗೆ ಹಿನ್ನಡೆ