Publish Date: Mon, 03 Sep 2018 (17:18 IST)
Updated Date: Mon, 03 Sep 2018 (17:20 IST)
ಸಲ್ಮಾನ್ ಖಾನ್ ಮುಖ್ಯ ಪಾತ್ರದಲ್ಲಿರುವ ಭಾರತ್ ಚಿತ್ರ ತನ್ನ ತಂಡಕ್ಕೆ ಹೊಸ ಸದಸ್ಯರನ್ನು ಸೇರಿಸಿಕೊಡಿದೆ. ಜಾಕಿ ಶ್ರಾಫ್ ಅವರು ಸಲ್ಮಾನ್ ಅವರ ತಂದೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬುದನ್ನು ಈ ಚಿತ್ರದ ನಿರ್ದೇಶಕರಾದ ಅಲಿ ಅಬ್ಬಾಸ್ ಸ್ವತಃ ಖಚಿತಪಡಿಸಿದ್ದಾರೆ. ಈ ಚಿತ್ರದಲ್ಲಿ ತಂದೆ ಮತ್ತು ಮಗನ ಶಾಶ್ವತ ಬಂಧವನ್ನು ತೋರಿಸಲಾಗುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಭಾರತ್ ತಂಡ ತನ್ನ ಎರಡನೇ ಹಂತದ ಶೂಟಿಂಗ್ ಅನ್ನು ಇತ್ತೀಚೆಗೆ ಮಾಲ್ಟಾದಲ್ಲಿ ಪೂರ್ಣಗೊಳಿಸಿದ್ದು, ಚಿತ್ರದ ಕುರಿತು ಜನರಲ್ಲಿ ಆಸಕ್ತಿಯನ್ನು ಹೆಚ್ಚಿಸಲು ಸೆಟ್‌ಗಳಲ್ಲಿನ ಫೋಟೋಗಳನ್ನು ಹಂಚಿಕೊಳ್ಳುತ್ತಿದೆ. ಮೊದಲನೇ ಹಂತದ ಚಿತ್ರೀಕರಣವನ್ನು ಈಗಾಗಲೇ ಮುಗಿಸಿದ್ದು ಅದರಲ್ಲಿ ಸಲ್ಮಾನ್ ಹಾಗೂ ದಿಶಾ ಪಟಾಣಿ ಅವರಿದ್ದಾರೆ. ವೈಭವಿ ಮರ್ಚೆಂಟ್ ಅವರ ಸಂಯೋಜನೆಯ ಹಾಡನ್ನು ಮೊದಲ ಹಂತದಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ದಿಶಾ ಪಟಾಣಿ ಅವರನ್ನು ಟ್ರಾಪೆಜ್ ಕಲಾವಿದೆಯಾಗಿ ಪ್ರದರ್ಶಿಸಲಾಗಿದ್ದು, ಆ್ಯಕ್ಷನ್ ಸನ್ನಿವೇಶಗಳು ಮತ್ತು ಸಾಹಸಮಯ ಸ್ಟಂಟ್‌ಗಳನ್ನು ಚಿತ್ರೀಕರಿಸಲಾಗಿದೆ. ಇದಕ್ಕಾಗಿ ಚಿತ್ರವು ಸೆಟ್ಟೇರುವ ಕೆಲವು ತಿಂಗಳ ಮೊದಲೇ ಅವರು ತಯಾರಿಯನ್ನು ನಡೆಸಿದ್ದರು ಎಂದು ತಿಳಿದುಬಂದಿದೆ.
ಸುಲ್ತಾನ್, ಟೈಗರ್ ಜಿಂದಾ ಹೈ ಚಿತ್ರಗಳ ನಂತರ ಸಲ್ಮಾನ್ ಹಾಗೂ ಅಲಿ ಅಬ್ಬಾಸ್ ಅವರ ನಟ-ನಿರ್ದೇಶಕರ ಯಶಸ್ಸಿನ ಜೋಡಿಯು ಭಾರತ್ ಮೂಲಕ ಹ್ಯಾಟ್ರಿಕ್ ಸಾಧನೆಯ ಹಾದಿಯಲ್ಲಿದೆ. ಈ ಚಿತ್ರದ ಮುಖ್ಯ ತಾರಾಗಣದಲ್ಲಿ ಸಲ್ಮಾನ್ ಖಾನ್, ಕತ್ರೀನಾ ಕೈಫ್, ದಿಶಾ ಪಟಾಣಿ, ಸುನಿಲ್ ಗ್ರೋವರ್, ಟಬು ಮತ್ತು ಜಾಕಿ ಶ್ರಾಫ್ ಇರಲಿದ್ದಾರೆ.