Select Your Language

Notifications

webdunia
webdunia
webdunia
webdunia

ಅಳಿವಿನಂಚಿನಲ್ಲಿರುವ ವನ್ಯಜೀವಿಗಿಲ್ಲ ರಕ್ಷಣೆ : ಕೃಷ್ಣಮೃಗಗಳ ಬೇಟೆ

ಅಳಿವಿನಂಚಿನಲ್ಲಿರುವ  ವನ್ಯಜೀವಿಗಿಲ್ಲ ರಕ್ಷಣೆ : ಕೃಷ್ಣಮೃಗಗಳ ಬೇಟೆ
ಚಾಮರಾಜನಗರ , ಸೋಮವಾರ, 5 ಜುಲೈ 2021 (11:54 IST)
ಚಾಮರಾಜನಗರ: ಕೃಷ್ಣಮೃಗಗಳ ಸಂರಕ್ಷಿತ ಮೀಸಲು ಪ್ರದೇಶದಲ್ಲೇ ಕೃಷ್ಣ ಮೃಗಗಳ ಬೇಟೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಚಾಮರಾಜನಗರ ತಾಲೂಕು ಉಮ್ಮತ್ತೂರು ಬಳಿ ಇರುವ ಬಸವನಗುಡ್ಡ, ಕೊಳಲು ಗೋಪಾಲಸ್ವಾಮಿ ಬೆಟ್ಟ ಗುಡ್ಡ,   ಚಾಮರಾಜನಗರ ತಾಲೋಕಿನ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ  ನಂಜನಗೂಡು ತಾಲ್ಲೂಕಿನ ಚಿಕ್ಕಹೊಮ್ಮ ಗುಡ್ಡ , ದೊಡ್ಡಹೊಮ್ಮ ಗುಡ್ಡ ಮೊದಲಾದ ಪ್ರದೇಶಗಳಲ್ಲಿ ಹಾಡು ಹಗಲೇ ಕೃಷ್ಣಮೃಗಗಳನ್ನು ಬಂದೂಕಿನಿಂದ ಕೊಂದು ವಾಹನಗಳಲ್ಲಿ ಕೊಂಡಯ್ಯಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದು ಅಳಿವಿನಂಚಿನಲ್ಲಿರುವ   ಈ ಅಪರೂಪದ ವನ್ಯಜೀವಿಗಳಿಗೆ ರಕ್ಷಣೆ ಇಲ್ಲದಂತಾಗಿದೆ.




2018 ರಲ್ಲೇ ಈ ವ್ಯಾಪ್ತಿಯ 1509 ಎಕರೆ ಪ್ರದೇಶವನ್ಮು ಕೃಷ್ಣಮೃಗಗಳ ಸಂರಕ್ಷಿತ  ಮೀಸಲು ಪ್ರದೇಶ ಎಂದು ಘೋಷಿಸಲಾಗಿದೆ. ಆದರೆ ಇದುವರೆಗೂ ಯಾವುದೇ ರೀತಿಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳದೆ ಇದು ಕೇವಲ ಘೋಷಣೆಗೆ ಸೀಮಿತವಾಗಿದೆ. ಈ ಪ್ರದೇಶ ಕೃಷ್ಣಮೃಗಗಳ ಆವಾಸಸ್ಥಾನವಾಗಿದ್ದು ನೂರಾರು ಸಂಖ್ಯೆಯ ಕೃಷ್ಣಮೃಗಗಳು ಇಲ್ಲಿವೆ. ಈ ಪ್ರದೇಶ ರಾಜ್ಯದಲ್ಲೇ ಮೂರನೇ ಕೃಷ್ಣಮೃಗ ಸಂರಕ್ಷಿತ ಮೀಸಲು ಪ್ರದೇಶ ಎನ್ನುವ ಹೆಗ್ಗಳಿಕೆಗು ಪಾತ್ರವಾಗಿದೆ. ಆದರೆ ಈ ಭಾಗದಲ್ಲಿ ಸಾಕಷ್ಟು ಕಳ್ಳಬೇಟೆ ತಡೆ ಶಿಬಿರಗಳಿಲ್ಲ, ಸಮರ್ಪಕ ಗಸ್ತು ನಡೆಯುತ್ತಿಲ್ಲ, ಈ ಪ್ರದೇಶಗಳ ಸುತ್ತ ಸೋಲಾರ್ ತಂತಿ ಬೇಲಿ ಇಲ್ಲವಾಗಿದ್ದು ಬೇಟೆಗಾರರಿಗೆ ವರದಾನವಾಗಿದೆ.
ಇಲ್ಲಿ  ಮಾಂಸಕ್ಕಾಗಿ ಕೃಷ್ಣ ಮೃಗಗಳ ಬೇಟೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ವ್ಯಕ್ತವಾಗಿದೆ. ಇತ್ತೀಚೆಗಷ್ಟೆ ಚಿಕ್ಕಹೊಮ್ಮ ಗ್ರಾಮದ ಬಳಿ ಚಾಮರಾಜನಗರ ರಸ್ತೆಯಲ್ಲಿ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಬಂದೂಕು ಹಾರಿಸಿ ಕೃಷ್ಣ ಮೃಗವನ್ನು ಕೊಂದಿದ್ದಾರೆ, ಬಂದೂಕಿನ ಸದ್ದು ಕೇಳಿ ಪಕ್ಕದ ತೋಟದವರು ಬರುವಷ್ಟರಲ್ಲಿ ಕೃಷ್ಣಮೃಗವನ್ನು ಕಾರಿನಲ್ಲಿ ಹಾಕಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ, ನಾವು ಹೋಗಿ ನೋಡುವಷ್ಟರಲ್ಲಿ   ಅಲ್ಲಿ ರಕ್ತ ಚಲ್ಲಿತ್ತು, ಆ ದೃಶ್ಯ ಕಂಡು ಹೊಟ್ಟೆ ಉರಿಯಿತು, ಇಂತಹ ಘಟನೆಗಳು ಆಗಿಂದಾಗ್ಗೆ ನಡೆಯುತ್ತಲೇ ಇವೆ, ಎಂದು ಚಿಕ್ಕ ಹೊಮ್ಮ ಗ್ರಾಮದ ಮಹೇಶ್ ಸ್ವಾಮಿ ಮರುಕ ವ್ಯಕ್ತಪಡಿಸಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ದೌರ್ಜನ್ಯಕ್ಕೆ ವಿರೋಧಿಸಿದ್ದಕ್ಕೆ ಯುವತಿ ಮೇಲೆ ಹಲ್ಲೆ