Select Your Language

Notifications

webdunia
webdunia
webdunia
webdunia

ಪಿಯು ರಿಪೀಟರ್ಸ್ಗೆ ಗುಡ್ ನ್ಯೂಸ್

ರಿಪೀಟರ್ಸ್ ಅಭ್ಯರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸ್ ಮಾಡಲು ನಿರ್ಧರಿಸಿದೆ.

ಪಿಯು ರಿಪೀಟರ್ಸ್ಗೆ ಗುಡ್ ನ್ಯೂಸ್
ಬೆಂಗಳೂರು , ಭಾನುವಾರ, 4 ಜುಲೈ 2021 (20:23 IST)
ಬೆಂಗಳೂರು(ಜು.04): ಕೊರೋನಾ ಕಾರಣದಿಂದಾಗಿ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪಾಸ್ ಮಾಡಿದ್ದ ಸರ್ಕಾರಕ್ಕೆ ರಿಪೀಟರ್ಸ್ಗಳದ್ದೇ ತಲೆನೋವಾಗಿತ್ತು. ನಮ್ಮನ್ನು ಯಾಕೆ ಪಾಸ್ ಮಾಡಿಲ್ಲ ಎಂದು ರಿಪೀಟರ್ಸ್ ವಿದ್ಯಾರ್ಥಿಗಳು ಕೋರ್ಟ್ ಮೊರೆ ಹೋಗಿದ್ದರು.


















ಬಳಿಕ ಕೋರ್ಟ್ ಸೆಕೆಂಡ್ ಪಿಯು ಫಲಿತಾಂಶ ಪ್ರಕಟಕ್ಕೆ ತಡೆ ನೀಡಿತ್ತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಸರ್ಕಾರ ಒಂದು ನಿರ್ಣಯ ಕೈಗೊಂಡಿದ್ದು, ರಿಪೀರ್ಟರ್ಸ್ನ್ನು ಪಾಸ್ ಮಾಡಲು ಮುಂದಾಗಿದೆ. ಈ ಬಾರಿ ದ್ವಿತೀಯ ಪಿಯು ಫ್ರೆಶರ್ಸ್ ವಿದ್ಯಾರ್ಥಿಗಳಂತೆ, ರಿಪೀಟರ್ಸ್ಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡಲು ನಿರ್ಧರಿಸಿದೆ. ಈ ಬಗ್ಗೆ ನ್ಯೂಸ್ 18ಗೆ ಪಿಯು ಬೋರ್ಡ್ನಿಂದ ಖಚಿತ ಮಾಹಿತಿ ಲಭ್ಯವಾಗಿದೆ.
ರಿಪೀಟರ್ಸ್ಗೆ ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸ್ ಮಾಡಲು ಪಿಯು ಮಂಡಳಿ ನಿರ್ಧಾರ ಮಾಡಿದೆ. ಈ ಮೊದಲು ಸರ್ಕಾರವು ಫ್ರೆಶರ್ಸ್ ವಿದ್ಯಾರ್ಥಿಗಳನ್ನ ಮಾತ್ರ ಪರೀಕ್ಷೆ ಇಲ್ಲದೆಯೇ ಪಾಸ್ ಮಾಡಿತ್ತು. ರಿಪೀಟರ್ಸ್ ಇದನ್ನ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಚಾಟಿ ಬೀಸಿದ ಬಳಿಕ ಪಿಯು ಬೋರ್ಡ್ ಸಮಿತಿ ರಚಿಸಿತ್ತು.  ರಿಪೀಟರ್ಸ್ಗಳನ್ನು ಪಾಸ್ ಮಾಡಬೇಕಾ ಅಥವಾ ಪರೀಕ್ಷೆ ನಡೆಸಬೇಕಾ ಎಂಬ ಗೊಂದಲದಲ್ಲಿ ಸರ್ಕಾರ ಇತ್ತು.
ರಿಪೀಟರ್ಸ್ ಗೆ ಯಾವ ಕ್ರೈಟೀರಿಯಗಳು ಇಲ್ಲದ ಕಾರಣ,  ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಪಾಸ್ ಭಾಗ್ಯ ಸಿಕ್ಕಿದೆ. ಫ್ರೆಶರ್ಸ್ ವಿದ್ಯಾರ್ಥಿಗಳಿಗೆ ಹಿಂದಿನ ತರಗತಿಯ ಅಂಕಗಳನ್ನ ಆಧರಿಸಿ ಪ್ರೊಮೋಟ್ ಮಾಡಲಾಗಿತ್ತು.  ರಿಪೀಟರ್ಸ್ ಅಭ್ಯರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸ್ ಮಾಡಲು ನಿರ್ಧರಿಸಿದೆ.  ಆದರೆ ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ವಿನಾಯ್ತಿ ಇಲ್ಲ.  ಪರೀಕ್ಷೆಗೆ ನೊಂದಾಯಿಸಿಕೊಂಡ ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲೇಬೇಕಿದೆ.
ಸೋಂಕಿನ ತೀವ್ರತೆ ಕಡಿಮೆಯಾದ ಬಳಿಕ ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆ

Share this Story:

Follow Webdunia kannada

ಮುಂದಿನ ಸುದ್ದಿ

ಮರಿ ಆನೆ ಅಂಬಾರಿ ಹೊರಲು ಕೊಡಲ್ಲ: ವಿಜಯೇಂದ್ರಗೆ ಯೋಗೇಶ್ವರ್ ಟಾಂಗ್