ಅನ್ಲಾಕ್ 3.0 ಗೈಡ್ಲೈನ್ ಬಿಡುಗಡೆ
ಅನ್ಲಾಕ್ 3.0 ಗೈಡ್ಲೈನ್ ಬಿಡುಗಡೆ; ರಾಜ್ಯದಲ್ಲಿ ಏನಿದೆ.. ಏನಿಲ್ಲ?? ಇಲ್ಲಿದೆ ಮಾಹಿತಿ!
ಬೆಂಗಳೂರು (ಜುಲೈ 04); ಕೊರೋನಾ ಎರಡನೇ ಅಲೆ ರಾಜ್ಯದಲ್ಲಿ ಅಪಾರ ಸಾವು-ನೋವಿಗೆ ಕಾರಣವಾಗಿತ್ತು. ಪರಿಣಾಮ ಕಳೆದ ತಿಂಗಳು ಲಾಕ್ಡೌನ್ ಹೇರಲಾಗಿತ್ತು. ಆದರೆ, ಇದೀಗ ಕೊರೋನಾ ಅಲೆ ಕ್ರಮೇಣ ಇಳಿಕೆಯಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಹಂತಹಂತವಾಗಿ ಅನ್ಲಾಕ್ ಮಾಡಲಾಗುತ್ತಿದೆ.
ಈಗಾಗಲೇ ಎರಡು ಹಂತದಲ್ಲಿ ಅನ್ಲಾಕ್ ಮಾಡಲಾಗಿತ್ತು, ಕೆಲವು ವಿಭಾಗಗಳನ್ನು ಹೊರತುಪಡಿಸಿ ಬಹುತೇಕ ಕ್ಷೇತ್ರಗಳಿಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಜನ ಸಹ ರಸ್ತೆಗೆ ಇಳಿದು ಓಡಾಡಲು ಆರಂಭಿಸಿದ್ದಾರೆ. ಆರ್ಥಿಕತೆ ಪುನಃ ಚೇತರಿಕೆಯ ಹಾದಿ ಹಿಡಿದಿದೆ. ಆದರೆ, ಏನೇ ಆದರೂ ಸರ್ಕಾರ ಮಾತ್ರ ಕೆಲವು ಕ್ಷೇತ್ರಗಳಿಗೆ ಈವರೆಗೆ ಅವಕಾಶ ನೀಡಿಲ್ಲ. ಹೀಗಾಗಿ ಅನ್ಲಾಕ್ 3.0 ರಲ್ಲಿ ಸರ್ಕಾರ ಅನೇಕ ಕ್ಷೇತ್ರಗಳಿಗೆ ಅವಕಾಶ ನೀಡಲಿದೆ ಎನ್ನಲಾಗಿತ್ತು. ಆದರೆ, ಇಂದು ಸರ್ಕಾರ ಗೈಡ್ಲೈನ್ ಬಿಡುಗಡೆ ಮಾಡಿದ್ದು ಏನಿದೆ? ಏನಿಲ್ಲ? ಇಲ್ಲದೆ ಮಾಹಿತಿ.
ಮುಂದಿನ 15 ದಿನಗಳವರೆಗೆ ಈ ಕೆಳಗಿನ ಸಡಿಲಿಕೆ ಮತ್ತು ನಿರ್ಬಂಧಗಳು ಜಾರಿಯಲ್ಲಿರುತ್ತವೆ.
1. ಚಿತ್ರಮಂದಿರಗಳು / ಸಿನೆಮಾ ಹಾಲ್ಗಳು ಮತ್ತು ಪಬ್ಗಳ ಮೇಲಿನ ನಿರ್ಬಂಧಗಳು ಹಾಗೆ ಮುಂದುವರೆಯುತ್ತದೆ.
2. ಸ್ಪರ್ಧಾತ್ಮಕ ತರಬೇತಿ ಉದ್ದೇಶಕ್ಕಾಗಿ ಮಾತ್ರ ಈಜುಕೊಳಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
3. ಅಭ್ಯಾಸದ ಉದ್ದೇಶಕ್ಕಾಗಿ ಮಾತ್ರ ಕ್ರೀಡಾ ಸಂಕೀರ್ಣಗಳು ಮತ್ತು ಕ್ರೀಡಾಂಗಣಗಳನ್ನು ತೆರೆಯಲಾಗುತ್ತದೆ.
4. ಎಲ್ಲಾ ಸಾಮಾಜಿಕ / ರಾಜಕೀಯ / ಕ್ರೀಡೆ / ಮನರಂಜನೆ / ಶೈಕ್ಷಣಿಕ / ಸಾಂಸ್ಕೃತಿಕ / ಧಾರ್ಮಿಕ ಕಾರ್ಯಗಳು / ಇತರ ಕೂಟಗಳು ಮತ್ತು ದೊಡ್ಡ ಸಭೆಗಳನ್ನು ನಿಷೇಧಿಸಲಾಗಿದೆ.
5. 100 ಕ್ಕಿಂತ ಹೆಚ್ಚು ಜನರನ್ನು ಒಳಗೊಳ್ಳದ ಮದುವೆ ಹಾಗೂ ಕೌಟುಂಬಿಕ ಕಾರ್ಯಗಳನ್ನು ನಡೆಸಲು ಅನುಮತಿ ನೀಡಲಾಗಿದೆ.5. ಶವಸಂಸ್ಕಾರ ಹಾಗೂ ಅಂತ್ಯಕ್ರಿಯೆಗಳನ್ನು ಗರಿಷ್ಠ 20 ಜನರೊಂದಿಗೆ ನಡೆಸಲು ಅನುಮತಿಸಲಾಗಿದೆ.
6. ದರ್ಶನಕ್ಕೆ ಮಾತ್ರ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು, ಯಾವುದೇ ಸೇವೆಗಳನ್ನು ಮಾಡುವಂತಿಲ್ಲ.
7. ಸಾರ್ವಜನಿಕ ಸಾರಿಗೆಯನ್ನು ಅದರ ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
8. ಎಲ್ಲಾ ಅಂಗಡಿಗಳು, ರೆಸ್ಟೋರೆಂಟ್ಗಳು, ಮಾಲ್ಗಳು, ಖಾಸಗಿ ಕಚೇರಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
9. ಮುಂದಿನ ಆದೇಶದವರೆಗೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು / ಟ್ಯುಟೋರಿಯಲ್ / ಕಾಲೇಜುಗಳು ಮುಚ್ಚಿಯೆ ಇರುತ್ತವೆ.
10. ರಾತ್ರಿ 9.00 ರಿಂದ ಬೆಳಿಗ್ಗೆ 5.00 ರವರೆಗೆ “ರಾತ್ರಿ ಕರ್ಫ್ಯೂ”ವನ್ನು ಮುಂದುವರೆಸಲಾಗಿದೆ, ಆದರೆ ವೀಕೆಂಡ್ ಕರ್ಫ್ಯೂ ಇರುವುದಿಲ್ಲ.
11. ಇದರ ಮೇಲೆ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪರಿಸ್ಥಿತಿಯ ಆಧಾರದ ಮೇಲೆ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚಿಸಿದ ನಂತರ, ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ವಿಧಿಸಬಹುದಾಗಿದೆ.