Select Your Language

Notifications

webdunia
webdunia
webdunia
webdunia

ಬರ್ತ್ ಡೇ ಬಲೂನ್ ತೆಗೆಯಿತು ಪ್ರಾಣ!

ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಭಯಾನಕ ಘಟನೆ!

ಬರ್ತ್ ಡೇ ಬಲೂನ್ ತೆಗೆಯಿತು ಪ್ರಾಣ!
ಬೆಂಗಳೂರು , ಭಾನುವಾರ, 4 ಜುಲೈ 2021 (00:00 IST)
ಬೆಂಗಳೂರು: ಬರ್ತ್ ಡೇ ಪಾರ್ಟಿಗಳು ಬಲೂನ್ಗಳಿಲ್ಲದೆ ಕಂಪ್ಲೀಟ್ ಆಗೋಲ್ಲ. ಸಂಭ್ರಮದ ಸಂಕೇತದಂತಿದ್ದ ಬಣ್ಣ ಬಣ್ಣದ ಬಲೂನ್ಗಳು ಇಂದು ಒಬ್ಬರ ಪ್ರಾಣವನ್ನೇ ತೆಗೆದಿದೆ. ಕೇಕ್ ಕಟ್ ಮಾಡಿ ಸೆಲೆಬ್ರೆಷನ್ ಮಾಡಬೇಕಾದ ಸ್ಥಳದಲ್ಲಿ ಭಯಾನಕ ಸ್ಫೋಟ ನಡೆದಿದೆ. ಬಲೂನ್ ಬ್ಲಾಸ್ಟ್ನಲ್ಲಿ ವ್ಯಕ್ತಿಯೊಬ್ಬರು ಪ್ರಾಣ ಬಿಟ್ಟಿದ್ದಾರೆ. ಬರ್ತ್ಡೇ ಆಚರಣೆಗೆಂದು ಬಲೂನ್ ಗ್ಯಾಸ್ ಫಿಲ್ ಮಾಡಬೇಕಾದರೆ ಸ್ಪೋಟ ಸಂಭವಿಸಿದೆ. ಗ್ಯಾಸ್ ಫಿಲ್ ಮಾಡುತಿದ್ದ ವ್ಯಕ್ತಿ ಸ್ಫೋಟದಿಂದ ಸಾವನ್ನಪ್ಪಿದ್ದಾರೆ.













 ಅಶೋಕನಗರದ ಅಪಾರ್ಟ್ಮೆಂಟ್ ಆವರಣದಲ್ಲಿ ಘಟನೆ ನಡೆದಿದೆ.
ಗ್ಯಾಸ್ ಮೂಲಕ ಬಲೂನ್ ಫಿಲ್ ಮಾಡುತ್ತಿದ್ದಾಗ ಭಯಾನಕ ಸ್ಫೋಟ ಸಂಭವಿಸಿದೆ.  ಬರ್ತ್ಗೆ ಪಾರ್ಟಿಗಳಿಗೆ ಬಲೂನ್ ಒದಗಿಸುತ್ತಿದ್ದ ಪರಪ್ಪನ ಅಗ್ರಹಾರ ನಿವಾಸಿಯಾದ ದಿನೇಶ್ (19) ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ದಿನೇಶ್ ಬರ್ತ್ ಡೇ ಕಾರ್ಯಕ್ರಮವೊಂದರಲ್ಲಿ ಬಲೂನ್ ಡಿಸೈನ್ ಒಪ್ಪಿಕೊಂಡಿದ್ದರು. ಬಲೂನ್ ಗ್ಯಾಸ್ ಸಹಿತ ಬೈಕ್ ನಲ್ಲಿ ಸಹಾಯಕ ಮಾಹದೇಶ್ ಜೊತೆಗೆ ಅಶೋಕನಗರದ ಅಪಾರ್ಟ್ಮೆಂಟ್ಗೆ ಆಗಮಿಸಿದ್ದರು.
ಅಪಾರ್ಟ್ಮೆಂಟ್ ಆವರಣದಲ್ಲೇ ಬೈಕ್ ನಿಲ್ಲಿಸಿಕೊಂಡು ಗ್ಯಾಸ್ ಫಿಲ್ಲಿಂಗ್ ಮಾಡುತ್ತಿದ್ದರು. ಈ ವೇಳೆ ಜೊತೆಗಿದ್ದ ವ್ಯಕ್ತಿ ನೀರು ತರಲೆಂದು ಅಪಾರ್ಟ್ಮೆಂಟ್ ಒಳಗೆ ಹೋಗಿದ್ದ. ಕೆಲವೇ ಕ್ಷಣಗಳಲ್ಲಿ ದಿನೇಶ್ ಒಬ್ಬರೇ ಬಲೂನ್ ಫಿಲ್ ಮಾಡುವ ವೇಳೆ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ದಿನೇಶ್ ಕೈ-ಕಾಲು, ದೇಹ ಛಿದ್ರಗೊಂಡು ಚಿಮ್ಮಿದೆ.
ಮೈ ಪಾರ್ಟಿ ಡಾಟ್ ಕಾಮ್ ಮೂಲಕ ನಂಬರ್ ಸಂಗ್ರಹಿಸಿದ್ದ ಫ್ಲ್ಯಾಟ್ ನಿವಾಸಿ, ಮನೆಯಲ್ಲಿ ಬರ್ತಡೇ ಪಾರ್ಟಿಗೆ ಬಲೂನ್ ಡಿಸೈನ್ ಆರ್ಡರ್ ಮಾಡಿದ್ದರು. ಒಟ್ಟು 200 ಬಲೂನ್ ಗಳನ್ನು ತಯಾರಿಸಲು ತಿಳಿಸಿದ್ದರು. ಅದರಂತೆ ನೂರು ಬಲೂನ್ ಮಾಡಿ ಕಳುಹಿಸಲಾಗಿತ್ತು. ಉಳಿದ ನೂರು ಬಲೂನ್ಗಳನ್ನು ತಯಾರಿಸುತಿದ್ದ ವೇಳೆ ಅವಘಡ ನಡೆಸಿದೆ. ಸ್ಫೂಟದ ತೀವ್ರತೆಗೆ ದಿನೇಶ್ ಅವರ ದೇಹ 10 ಅಡಿ ಎತ್ತರಕ್ಕೆ ಹಾರಿ ಮರಕ್ಕೆ ಹೊಡೆದು ಕೆಳಗೆ ಬಿದ್ದಿದೆ. ದೇಹ ಇಬ್ಭಾಗವಾಗಿ ಮೃತಪಟ್ಟಿದ್ದಾರೆ.
ಮೃತ ದಿನೇಶ್ ಕಳೆದ ನಾಲ್ಕು ವರ್ಷಗಳಿಂದ ಬಲೂನ್ ಕೆಲಸ ಮಾಡುತ್ತಿದ್ದರು. ಆನ್ ಲೈನ್ ಮುಖಾಂತರ ಸಿಕ್ಕ ಆರ್ಡರ್ಗೆ ಬಲೂನ್ ತಯಾರಿಕೆ ಮಾಡುತ್ತಿದ್ದರು. ಕೃತಕ ರಾಸಾಯನಿಕಗಳನ್ನು ಬಳಸಿ ಸಿಲಿಂಡರ್ ತಯಾರಿಸಿಕೊಂಡಿದ್ದರು. ಅದರ ಮೂಲಕ ಬಲೂನ್ ಫಿಲ್ಲಿಂಗ್ ಮಾಡುತಿದ್ದರು. ಫಿಲ್ಲಿಂಗ್ ವೇಳೆಯೇ ಭಯಾನಕ ಸ್ಫೋಟಕ್ಕೆ ತುತ್ತಾಗಿ ಪ್ರಾಣ ಬಿಟ್ಟಿದ್ದಾರೆ.
 ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.


Share this Story:

Follow Webdunia kannada

ಮುಂದಿನ ಸುದ್ದಿ

ಜು.5ರಿಂದ ವೀಕೆಂಡ್, ನೈಟ್ ಕರ್ಪ್ಯೂ ರದ್ದು!