ಗೋಲ್ಡನ್ ಸ್ಟಾರ್ 41 ನೇ ಜನುಮದಿನದ ಸಂಭ್ರಮ
ತ್ರಿಬಲ್ ರೈಡಿಂಗ್ನಲ್ಲಿ ಗಾಳಿಪಟ ಹಾರಿಸ್ತಿದ್ದಾರೆ ಬರ್ತಡೇ ಬಾಯ್ ಗಣೇಶ್
Bangalore : ಸಖತ್ ಸಿನಿಮಾದ ಜೊತೆಗೆ ತ್ರಿಬಲ್ ರೈಡಿಂಗ್ ಹೋಗಲು ರೆಡಿಯಾಗಿದ್ದಾರೆ. ಅಷ್ಟು ಮಾತ್ರವಲ್ಲದೆ, ಗಾಳಿಪಟ 2 ಹಾರಿಸಲು ಮುಂದಾಗಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್.
ನಮಸ್ಕಾರ.. ನಮಸ್ಕಾರ..ನಮಸ್ಕಾರ ಎನ್ನುತ್ತ ಅಭಿಮಾನಿಗಳ ಮನಗೆದ್ದ ಸ್ಯಾಂಡಲ್ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮುಂಗಾರು ಮಳೆಗೆ ಗಾಳಿಪಟ ಹಾರಿಸಿದ ಈ ನಟ ಇಂದು 41ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
ಅಭಿಮಾನಿಗಳಂತೂ ನೆಚ್ಚಿನ ನಟನಿಗೆ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರುತ್ತಿದ್ದಾರೆ.
ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ನಟ ಗಣೇಶ್ ಕೊರೋನಾ ಸಾಂಕ್ರಾಮಿಕದಿಂದಾಗಿರುವ ಸಾವು ನೋವುಗಳಿಂದ ಈ ಬಾರಿಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಹೇಳಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದ ಅವರು ಹುಟ್ಟುಹಬ್ಬದಂದು ಹೊರಾಂಗಣ ಚಿತ್ರೀಕರಣದಲ್ಲಿ ತೊಡಗಿಕೊಂಡಿರುತ್ತೇನೆ ಎಂದಿದ್ದರು.