Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಅಧಿಕಾರಿಗಳ ಮಾತು ಕೇಳಿ ಸರ್ಕಾರ ನಡೆಸಲು ಆಗುತ್ತಾ?

webdunia
ಶುಕ್ರವಾರ, 2 ಜುಲೈ 2021 (17:48 IST)
ರೋಹಿಣಿ, ಶಿಲ್ಪಾನಾಗ್ ಗೆ ಸಿದ್ದು ಗುದ್ದು
ಅಧಿಕಾರಿಗಳ ಮಾತು ಕೇಳಿಕೊಂಡು ಸರಕಾರ ನಡೆಸಲು ಆಗುತ್ತಾ? ಶಾಸನ ಸಭೆಯಲ್ಲಿ ಉತ್ತರ ಕೊಡಬೇಕಾದವರು ನಾವು ಐಎಎಸ್ ಅಧಿಕಾರಿಗಳು ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐಎಸ್ ಎಸ್ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಮತ್ತು ಶಿಲ್ಪಾ ನಾಗ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ಮೈಸೂರಿನಲ್ಲಿ ಗುರುವಾರ ಸುತ್ತೂರು ಶ್ರೀ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಮಾಧ್ಯಮಗಳ ಬಳಿ ಹೋಗುವುದೇ ತಪ್ಪು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಸ್ತು ಅಗತ್ಯ. ಈ ರೀತಿ ಅಧಿಕಾರಿಗಳು ಮಾಧ್ಯಮಗಳ ಮುಂದೆ ಹೋಗುವುದೇ ತಪ್ಪು ಎಂದು ಹೇಳಿದರು.
ಮೈಸೂರಿನಲ್ಲಿ ನನ್ನ ಆಡಳಿತದ ವೇಳೆ ಹೊಸ ಜಿಲ್ಲಾಧಿಕಾರಿ ಕಚೇರಿ ಉದ್ಘಾಟಿಸಿದ್ದೇನೆ. ಅಲ್ಲಿ ಇನ್ನೂ ಸಂಪೂರ್ಣವಾಗಿ ಹೊಸ ಕಚೇರಿಗೆ ಶಿಫ್ಟ್ ಆಗಿಲ್ಲ. ಡಿಸಿ ಮನೆ ಹತ್ತಿರ ಇದೇ ಎಂಬ ಕಾರಣಕ್ಕೆ ಎಲ್ಲರೂ ಹಳೆ ಕಚೇರಿಯಲ್ಲೇ ಉಳಿದಿರಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಶಾಸಕ ಶ್ರೀನಿವಾಸಗೌಡ ಪುತ್ರನ ಕಾರು ಅಪಘಾತ