Select Your Language

Notifications

webdunia
webdunia
webdunia
webdunia

ಸರ್ಕಾರೀ ಸಾಮ್ರಾಜ್ಯ ಶುರು !

ಖಾಸಗಿ ಸ್ಕೂಲ್ಗಳ ಫೀಸ್ ಕಾಟಕ್ಕೆ ಬೇಸತ್ತು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಿರುವ ಪೋಷಕರು!

ಸರ್ಕಾರೀ ಸಾಮ್ರಾಜ್ಯ ಶುರು !
Bangalore , ಶುಕ್ರವಾರ, 2 ಜುಲೈ 2021 (07:21 IST)
ಬೆಂಗಳೂರು:ಕೊರೊನಾ ಹಿನ್ನೆಲೆ ನಗರ ಪ್ರದೇಶ ತೊರೆದು ಗ್ರಾಮೀಣ ಪ್ರದೇಶಗಳಿಗೆ ಪೋಷಕರು ಮುಖ ಮಾಡಿದ್ದಾರೆ. ಹೀಗಾಗಿ ಹೆಚ್ಚಿನ ಪೋಷಕರು  ಮಕ್ಕಳನ್ನ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.


















 ಸರ್ಕಾರಿ ಶಾಲೆನಾ ಎಂದು ಮೂಗು ಮುರಿಯುತ್ತಿದ್ದವರು ಈಗ ಬೆರಳಿಟ್ಟುಕೊಳ್ಳುವ ಪ್ರಸಂಗ ಎದುರಾಗ್ತಿದೆ. ಖಾಸಗಿ ಶಾಲೆಗೆ ಸೇರಿಸುತ್ತಿದ್ದ ಮಕ್ಕಳು ಕೊರೊನಾದಿಂದಾಗಿ ಸರ್ಕಾರಿ ಶಾಲೆ ದಾಖಲಾಗುತ್ತಿದ್ದಾರೆ. ಕೊರೊನಾ ಕಳೆದ ಒಂದೂವರೆ ವರ್ಷದಿಂದಲೂ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಆನ್ ಲೈನ್, ಯೂಟ್ಯೂಬ್ ಪಾಠ ಜಂಜಾಟದ ನಡುವೆ ಪೋಷಕರಿಗೆ ಫೀಸ್ ಪೀಕಲಾಟ ಕೂಡ ಶುರುವಾಗಿತ್ತು. ಕಳೆದ 15 ತಿಂಗಳುಗಳಿಂದ ಶಾಲೆಯ ಮುಖವನ್ನೇ ನೋಡದ ಮಕ್ಕಳಿಗೆ ಯಾಕೆ ಪೂರ್ಣ ಶುಲ್ಕ ಕಟ್ಟಬೇಕೆಂಬ ಗಲಾಟೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೋರಾಗಿತ್ತು. ದಿನ ಬೆಳಗಾದ್ರೆ ಶುಲ್ಕ ವಿಚಾರವಾಗಿ ಖಾಸಗಿ ಶಾಲೆಗಳು ಪೋಷಕರ ನಡುವೆ ವಾಗ್ವಾದ ನಡೀತಿತ್ತು. ಕಳೆದ ವರ್ಷದಿಂದ ಎಷ್ಟೋ ಪ್ರತಿಭಟನೆ ಹೋರಾಟ ನಡೆಯುತ್ತಿದ್ರೂ ಶುಲ್ಕ ಕಡಿತವನ್ನ ಹಲವು ಶಾಲೆಗಳು ಧಿಕ್ಕರಿಸಿವೆ. ಇದರ ಕೊರೊನಾ ಕಾಟದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸೋದಕ್ಕೆ ಒದ್ದಾಡುತ್ತಿದ್ದರು.ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆಗಳಲು ದಾಖಲೆ ಮಟ್ಟದಲ್ಲಿ ದಾಖಲಾತಿ ಆಗ್ತಿದೆ. 2021-22ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಗಣನೀಯವಾಗಿ ಅಡ್ಮಿಷನ್ ಪ್ರಕ್ರಿಯೆ ಹೆಚ್ಚಾಗ್ತಿದೆ 1ರಿಂದ 10ನೇ ತರಗತಿವರೆಗೂ ಸರ್ಕಾರಿ ಶಾಲೆಗಳಿಗೆ ಲಕ್ಷಾಂತರ ಮಕ್ಕಳ ದಾಖಲಾತಿ ಆಗಿದ್ದಾರೆ. ಜೂನ್ 15 ರಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, ಕೇವಲ 15 ದಿನದಲ್ಲೇ ಸರ್ಕಾರಿ ಶಾಲೆಗಳಿಗೆ ಬಂಪರ್ ಹೊಡೆದಿದೆ. ಜೂ.15 ರಿಂದ ಈವರೆಗೆ ಒಟ್ಟು 16,52,613 ಮಕ್ಕಳು ಸರ್ಕಾರಿ ಶಾಲೆಗೆ ಸೇರ್ಪಡೆಯಾಗಿದ್ದಾರೆ. ಆರ್ಥಿಕ ಸಂಕಷ್ಟದಿಂದ ಖಾಸಗಿ ಶಾಲೆಗಳ ಪೋಷಕರು ಶುಲ್ಕ ಕಟ್ಟಲಾಗದೆ ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಜೊತೆಗೆ ಕೊರೊನಾ ಭಯಕ್ಕೆ ತಮ್ಮ ಸ್ವಂತ ಊರುಗಳನ್ನ ಸೇರಿರುವ ಪೋಷಕರು ತಮ್ಮ ಮಕ್ಕಳಿಗೆ ಗ್ರಾಮೀಣ ಭಾಗದಲ್ಲೇ ಶಿಕ್ಷಣ ಕೊಡಿಸಲು ಮುಂದಾಗಿದ್ದು, ಸರ್ಕಾರಿ ಶಾಲೆಗಳಿಗೆ ಹೆಚ್ಚು ಅಡ್ಮಿಷನ್ ಮಾಡ್ತಿದ್ದಾರೆ.
 
2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಯಾವ ಶಾಲೆ ಎಷ್ಟೆಷ್ಟು ಮಕ್ಕಳು ದಾಖಲು..?ಸರ್ಕಾರಿ ಶಾಲೆಯಲ್ಲಿ ಒಟ್ಟು 16,53,613 ಮಕ್ಕಳು ದಾಖಲುಅನುದಾನಿತ ಶಾಲೆಗಳಲ್ಲಿ 3,10,883 ಮಕ್ಕಳು ದಾಖಲಾತಿಖಾಸಗಿ ಶಾಲೆಗಳಲ್ಲಿ 4,48,699 ಮಕ್ಕಳು ದಾಖಲು
2021-22ನೇ ಶೈಕ್ಷಣಿಕ ವರ್ಷದಲ್ಲಿ ದಾಖಲಾದ ಮಕ್ಕಳ ವಿವರ2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಿಗೆ ದಾಖಲಾದ ಮಕ್ಕಳ ವಿವರಸರ್ಕಾರಿ ಶಾಲೆಗೆ 42,91,812 ವಿದ್ಯಾರ್ಥಿಗಳು ದಾಖಲುಅನುದಾನಿತ ಶಾಲೆಗಳಿಗೆ 13,17,233 ಮಕ್ಕಳ ದಾಖಲಾತಿಖಾಸಗಿ ಶಾಲೆಗಳಿಗೆ 45,34,201 ಮಕ್ಕಳು ದಾಖಲು ಈ ವರ್ಷ ದಾಖಲಾತಿಗೆ ಮತ್ತಷ್ಟು ಸಮಯಾವಕಾಶವಿದ್ದು, ಆಗಸ್ಟ್ ತಿಂಗಳವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ದಾಖಲಾಗುವ ನಿರೀಕ್ಷೆಯಲ್ಲಿ ಶಿಕ್ಷಣ ಇಲಾಖೆ ಇದೆ.
webdunia




 
ಇತ್ತ ಜಿಲ್ಲೆಗಳ ದಾಖಲಾತಿಯಲ್ಲಿ ಖಾಸಗಿ ಶಾಲೆಗಳನ್ನ ಹಿಂದಿಕ್ಕಿ, ಜಿಲ್ಲೆಗಳಲ್ಲಿನ ಸರ್ಕಾರಿ ಶಾಲೆಗಳೇ ಟಾಪ್ ಒನ್ ನಲ್ಲಿವೆ. ಹಾವೇರಿ, ಮಂಡ್ಯ, ಮೈಸೂರು, ದಾವಣಗೆರೆ, ಬೀದರ್, ಕಲಬುರ್ಗಿ, ಯಾದಗಿರಿ, ಗದಗ, ಬಳ್ಳಾರಿ, ರಾಯಚೂರು, ಕೊಪ್ಪಳ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಶಿರಸಿ, ಕಾರವಾರ, ಮಂಗಳೂರು, ಕೋಲಾರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಬೆಂ. ಗ್ರಾಮಾಂತರ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬು ಕುಮಾರ್, ಕೊರೊನಾ ಹಿನ್ನೆಲೆ ನಗರ ಪ್ರದೇಶ ತೊರೆದು ಗ್ರಾಮೀಣ ಪ್ರದೇಶಗಳಿಗೆ ಪೋಷಕರು ಮುಖ ಮಾಡಿದ್ದಾರೆ. ಹೀಗಾಗಿ ಹೆಚ್ಚಿನ ಪೋಷಕರು  ಮಕ್ಕಳನ್ನ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.

 
1-10ನೇ ತರಗತಿಗೆವರೆಗೆ ಸರ್ಕಾರಿ ಶಾಲೆಗಳಲ್ಲೇ 16 ಲಕ್ಷಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನ ಶಾಲೆಗೆ ಕರೆತರಲು ಪ್ರಯತ್ನ ನಡೀತಿದೆ. ಹೀಗಾಗಿ ಕಳೆದ 15 ದಿನದಿಂದ ಶಿಕ್ಷಕರು ಮನೆ ಮನೆಗೆ ತೆರಳಿ ಮಕ್ಕಳನ್ನ ಶಾಲೆಗೆ ಕರೆ ತರುವ ಕೆಲಸ ಮಾಡ್ತಿದ್ದಾರೆ. ದಾಖಲಾತಿ ಪ್ರಕ್ರಿಯೆ ಏರಿಕೆಯಲ್ಲಿ ಶಿಕ್ಷಕರ ಪರಿಶ್ರಮ ಹೆಚ್ಚು. ದಾಖಲಾತಿ ಪ್ರಕ್ರಿಯೆ ಇನ್ನು ಕೂಡ ಮುಂದುವರೆಯುತ್ತೆ ಅಂತ ತಿಳಿಸಿದ್ದಾರೆ.ಒಟ್ಟಿನಲ್ಲಿ ಸರ್ಕಾರಿ ಶಾಲೆ ಅಂದ್ರೆ ಕೊಂಕು ಮಾತನಾಡ್ತಿದ್ದ ಪೋಷಕರಿಗೆ ಕೊರೊನಾ ಪಾಠ ಕಲಿಸಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಎಷ್ಟೋ ಪೋಷಕರ ಮಕ್ಕಳನ್ನ ಸರ್ಕಾರಿ ಶಾಲೆಗಳತ್ತ ಮರಳಿ ತರಳು ಶಿಕ್ಷಣ ಇಲಾಖೆ ಕೂಡ ಸರ್ಕಸ್ ನಡೆಸ್ತಿದೆ. ಆದ್ರೆ, ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಹೆಚ್ಚಾಗ್ತಿರೋದು ಖಾಸಗಿ ಶಾಲೆಗಳಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅರವಿಂದ್ ಕಣ್ಣೀರಿಟ್ಟಿದ್ದಾದ್ರು ಯಾಕೆ?