Publish Date: Mon, 05 Jul 2021 (11:50 IST)
Updated Date: Mon, 05 Jul 2021 (10:21 IST)
ಮುಂಬೈ: ಲೈಂಗಿಕ ಕಿರುಕುಳ ನೀಡುವಾಗ ಪ್ರತಿರೋಧ ತೋರಿದ್ದಕ್ಕೆ ಯುವತಿ ಮೇಲೆ ಆಟೋ ಚಾಲಕ ಮತ್ತು ಆತನ ಸಂಗಡಿಗರು ಹಲ್ಲೆ ನಡೆಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ತನ್ನ ಆಟೋದಲ್ಲಿ ಬಂದ ಯುವತಿಗೆ ಮೊಬೈಲ್ ನಂಬರ್ ಕೊಡುವಂತೆ ಚಾಲಕ ಒತ್ತಾಯಿಸಿದ್ದಾನೆ. ಕೊಡದೇ ಹೋದಾಗ ಆಟೋ ಮನಬಂದಂತೆ ಚಲಾಯಿಸಿದ್ದಾನೆ. ತಕ್ಷಣವೇ ಯುವತಿ ತನ್ನ ಇಬ್ಬರು ಪುರುಷ ಸ್ನೇಹಿತರಿಗೆ ಕರೆ ಮಾಡಿದ್ದಾಳೆ.
ಸ್ನೇಹಿತರು ಯುವತಿಯಿದ್ದ ಆಟೋ ಹಿಂಬಾಲಿಸಿ ಬಂದಾಗ ರೊಚ್ಚಿಗೆದ್ದ ಚಾಲಕ ತನ್ನ ಬೇರೆ ಚಾಲಕ ಸ್ನೇಹಿತರೊಂದಿಗೆ ಸೇರಿಕೊಂಡು ಯುವತಿ ಮತ್ತು ಸ್ನೇಹಿತರ ಮೇಲೆ ಆರೋಪಿ ಚಾಲಕ ಹಲ್ಲೆ ನಡೆಸಿದ್ದಾನೆ. ಈ ಘಟನೆಗಳನ್ನು ಸ್ಥಳೀಯರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದೀಗ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.