Publish Date: Sun, 04 Jul 2021 (13:06 IST)
Updated Date: Sun, 04 Jul 2021 (11:08 IST)
ಬೆಂಗಳೂರು: ನವಜಾತ ಶಿಶುವೊಂದನ್ನು ಹತ್ಯೆ ಮಾಡಿ ಶೌಚಾಲಯದ ಕಿಟಿಕಿಯಲ್ಲಿ ನೇತು ಹಾಕಿದ ಬರ್ಬರ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಸಿಸಿಟಿವಿ ಪರಿಶೋಧಿಸಿದ ಪೊಲೀಸರಿಗೆ ಘಟನೆಗೆ ಕೆಲವೇ ಕ್ಷಣಗಳ ಮೊದಲು ಮಹಿಳೆಯೊಬ್ಬಳು ಮಗುವನ್ನು ಹೊತ್ತು ಶೌಚಾಲಯದೊಳಕ್ಕೆ ಹೋಗುವ ದೃಶ್ಯ ಕಾಣಿಸಿದೆ.
ಈ ಮಹಿಳೆಯೇ ಮಗುವನ್ನು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಇದೀಗ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಶಂಕಿತ ಮಹಿಳೆಗಾಗಿ ಹುಡುಕಾಟ ನಡೆಸಿದೆ.