Select Your Language

Notifications

webdunia
webdunia
webdunia
Tuesday, 8 April 2025
webdunia

ಏಳು ಹೆಜ್ಜೆ ಹಾಕಿದವಳು ಅರ್ಧದಿಂದಲೇ ಮದುವೆ ಬೇಡವೆಂದು ಹೊರನಡೆದಳು!

ಅಪರಾಧ ಸುದ್ದಿಗಳು
ರಾಂಚಿ , ಶುಕ್ರವಾರ, 2 ಜುಲೈ 2021 (11:23 IST)
ರಾಂಚಿ: ಮದುವೆಯಾಗುವುದಕ್ಕೆ ಕೆಲವೇ ನಿಮಿಷಗಳ ಮೊದಲು ಮದುವೆ ಬೇಡವೆನ್ನುವವರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ವಧು ಮದುವೆ ಶಾಸ್ತ್ರ ಅರ್ಧ ಮುಗಿದ ಬಳಿಕ ವರನನ್ನು ತೊರೆದಿದ್ದಾಳೆ.


ವರನೊಂದಿಗೆ ಸಪ್ತಪದಿ ತುಳಿದ ಬಳಿಕ ಇನ್ನೇನು ಸಿಂಧೂರ ಶಾಸ್ತ್ರ ಮಾಡಬೇಕು ಎನ್ನುವಷ್ಟರಲ್ಲಿ ವಧು ನನಗೆ ವರ ಇಷ್ಟವಿಲ್ಲ, ಮದುವೆ ಬೇಡ ಎಂದು ಮಂಟಪ ಬಿಟ್ಟು ಹೊರಟಿದ್ದಾಳೆ. ಜಾರ್ಖಂಡ್ ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.

ವರ ಮತ್ತು ವಧುವಿನ ಮನೆಯವರು ಎಷ್ಟೇ ಬೇಡಿಕೊಂಡರೂ ವಧುವಿನ ಮನಸ್ಸು ಕರಗಲಿಲ್ಲ. ಕೊನೆಗೆ ವರನ ಮನೆಯವರು ವಧುವಿನ ಮನೆಯವರ ಎದುರು ಧರಣಿ ನಡೆಸಿದ್ದು, ಮದುವೆಗೆ ಖರ್ಚಾದ ಹಣ ಮರಳಿಸುವಂತೆ ಬೇಡಿಕೆಯಿಟ್ಟಿದ್ದಾರೆ. ಆದರೆ ಸದ್ಯಕ್ಕೆ ತನ್ನ ಬಳಿ ಹಣವಿಲ್ಲವೆಂದು ವಧುವಿನ ತಂದೆ ಹೇಳಿದ್ದಾರೆ. ಕೊನೆಗೆ ಈ ಪ್ರಕರಣ ಗ್ರಾಮದ ಮುಖಂಡರ ಎದುರಿಗೆ ಬಂದಿದೆ. ಆಗಲೂ ಹುಡುಗಿ ನನಗೆ ವರ ಇಷ್ಟವಿಲ್ಲವೆಂದು ತಿರಸ್ಕರಿಸಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರೋನ್ ಸುಲಭವಾಗಿ ಸಿಗುವುದೇ ಸವಾಲಾಗಿದೆ: ಸೇನಾ ಮುಖ್ಯಸ್ಥ