Select Your Language

Notifications

webdunia
webdunia
webdunia
webdunia

ಆನ್ ಲೈನ್ ಕ್ಲಾಸ್ ಗೆ ತಾಯಿಯ ಮೊಬೈಲ್ ಪಡೆದು ಲಕ್ಷ ಹಣ ಎಗರಿಸಿದ ಪುತ್ರ!

ಅಪರಾಧ ಸುದ್ದಿಗಳು
ನವದೆಹಲಿ , ಗುರುವಾರ, 1 ಜುಲೈ 2021 (10:40 IST)
ನವದೆಹಲಿ: ಆನ್ ಲೈನ್ ತರಗತಿಗೆಂದು ತಂದೆ-ತಾಯಿ ಮೊಬೈಲ್ ಕೊಡಿಸಿದರೆ ಇಲ್ಲೊಬ್ಬ ಪುತ್ರ ಮಹಾಶಯ ಲೈವ್ ಗೇಮ್ ಆಡಿ ತಾಯಿಯ ಬ್ಯಾಂಕ್ ಖಾತೆಯಿಂದ 3.5 ಲಕ್ಷ ರೂ. ಎಗರಿಸಿದ್ದಾನೆ.


ಛತ್ತೀಸ್ ಘಡದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ತಾಯಿ ಶಿಕ್ಷಕಿಯಾಗಿದ್ದು ತಮ್ಮ ಕೆಲಸದಲ್ಲಿರುತ್ತಾರೆ. ತಂದೆಯೂ ಕೆಲಸದಲ್ಲಿ ಬ್ಯುಸಿ. ಹೀಗಿರುವಾಗ ಮಗನ ಆನ್ ಲೈನ್ ಕ್ಲಾಸ್ ಗೆಂದೇ ಪ್ರತ್ಯೇಕ ಮೊಬೈಲ್ ಕೊಡಿಸಿದ್ದರು.

ಆದರೆ ಪುತ್ರ ಮಹಾಶಯ ಆನ್ ಲೈನ್ ಲೈವ್ ಗೇಮ್ ಚಟಕ್ಕೆ ಬಿದ್ದು, ಹಣ ಕಳೆದುಕೊಂಡಿದ್ದಾನೆ. ಒಟಿಟಿಯ ನೆರವೂ ಇಲ್ಲದೇ ಖಾತೆಯಿಂದ ಹಣ ಹೋಗಿದ್ದು ಹೇಗೆ ಎಂಬುದು ಅಚ್ಚರಿಯಾಗಿದೆ. ಇದೀಗ ಹಣ ಕಳೆದುಕೊಂಡು ಗಾಬರಿಯಾಗಿರುವ ಪೋಷಕರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮನ ಸೀರೆಯೇ ಮಕ್ಕಳ ಪಾಲಿಗೆ ಮರಣದ ಉರುಳಾಯ್ತು