Select Your Language

Notifications

webdunia
webdunia
webdunia
webdunia

ಭಾರತದಲ್ಲೇ ವಾಯುಮಾಲಿನ್ಯ ಹೆಚ್ಚು!

ಭಾರತದಲ್ಲೇ ವಾಯುಮಾಲಿನ್ಯ ಹೆಚ್ಚು!
ಹೊಸದಿಲ್ಲಿ , ಸೋಮವಾರ, 29 ನವೆಂಬರ್ 2021 (11:16 IST)
ಹೊಸದಿಲ್ಲಿ : ಭಾರತದ ಹೊಸದಿಲ್ಲಿ ಮಾತ್ರವಲ್ಲ ಜಗತ್ತಿನ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ ದಿನೇದಿನೆ ಕುಸಿಯುತ್ತಿದೆ.
ಇದರಿಂದ ನಗರವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾದರೆ, ಜಗತ್ತಿನ ಯಾವ ನಗರಗಳಲ್ಲಿ ವಾಯು ಗುಣಮಟ್ಟ ಕುಸಿದಿದೆ? ಅವುಗಳಲ್ಲಿ ಭಾರತದ ನಗರಗಳು ಎಷ್ಟು? ಈ ಕುರಿತ ಮಾಹಿತಿ ಇಲ್ಲಿದೆ.
ಭಾರತ, ಚೀನಾ, ಪಾಕ್ನಲ್ಲಿ ಭಾರೀ ಸಮಸ್ಯೆ
ಗಾಳಿಯ ಗುಣಮಟ್ಟ ಕಳಪೆ ಇರುವ ಜಗತ್ತಿನ 100 ನಗರಗಳಲ್ಲಿ ಭಾರತ, ಚೀನಾ, ಪಾಕಿಸ್ತಾನದ್ದೇ 94ನಗರಗಳು ಇವೆ ಎಂಬುದು ಆತಂಕಕಾರಿಯಾಗಿದೆ. ನೂರು ನಗರಗಳ ಪೈಕಿ ಭಾರತದ 46, ಚೀನಾ 42, ಪಾಕಿಸ್ತಾನ 6, ಬಾಂಗ್ಲಾದೇಶ 4, ಇಂಡೋನೇಷ್ಯಾ ಹಾಗೂ ಥೈಲ್ಯಾಂಡ್ನ ತಲಾ ಒಂದು ನಗರಗಳು ಇವೆ.
•ಜಾಗತಿಕವಾಗಿ ವಾಯುಮಾಲಿನ್ಯದಿಂದ ವಾರ್ಷಿಕವಾಗಿ ಮೃತಪಡುವವರು: 70 ಲಕ್ಷ
•2019ರಲ್ಲಿ ಭಾರತದಾದ್ಯಂತ ಕಲುಷಿತ ಗಾಳಿ ಸೇವಿಸಿ ಮೃತಪಟ್ಟವರು: 16.7 ಲಕ್ಷ
•ದೇಶದ ಒಟ್ಟು ಸಾವಿನಲ್ಲಿ ವಾಯುಮಾಲಿನ್ಯದಿಂದ ಸತ್ತವರ ಪ್ರಮಾಣ: 17.8%
ಕಣ್ಣಿನ ಉರಿ, ಪದೇಪದೆ ಕಣ್ಣು ತಿಕ್ಕಿ ಕೆಂಪಾಗುವುದು, ಸಕ್ಕರೆ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು
ಶ್ವಾಸಕೋಶ ಕ್ಯಾನ್ಸರ್, ಪಾಶ್ರ್ವವಾಯು ಕಾಯಿಲೆ, ಹೃದಯಾಘಾತ ಸಂಭವಿಸುವುದು

.


Share this Story:

Follow Webdunia kannada

ಮುಂದಿನ ಸುದ್ದಿ

ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ಸಾಧ್ಯತೆ; ಸಿಎಂ