Select Your Language

Notifications

webdunia
webdunia
webdunia
webdunia

ಸಚಿವ ಎಂ.ಬಿ.ಪಾಟೀಲ ವಿರುದ್ಧ ಮಂಜುಳಾ ಗರಂ

ಎಂ.ಬಿ.ಪಾಟೀಲ್
ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ವಿರುದ್ಧ ಡಾ. ಮಂಜುಳಾ ವಾಗ್ದಾಳಿ ಮುಂದುವರಿಸಿದ್ದಾರೆ. 
ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.ಅದರ ಬಗ್ಗೆ ನೀವೇನು ಹೇಳುತ್ತೀರಿ? ಎಂದು ಸಚಿವ ಎಂ. ಬಿ. ಪಾಟೀಲ ಅವರಿಗೆ ಪ್ರಶ್ನೆ ಮಾಡಿದ ಮಂಜುಳಾ. ಸಚಿವರು ಒಗ್ಗಟ್ಟಿನಿಂದ ಚುನಾವಣೆ ಎದುರಿಸೋಣ ಎಂದು ಹೇಳಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
 
ಸಿಂದಗಿಯಿಂದ ಯಾರಿಗೇ ಬೇಕಾದ್ರು ಬಿ ಫಾರ್ಮಂ ಕೊಡ್ತಿನಿ ಆದ್ರೆ ಮಂಜುಳಾಗೆ ನೀಡಲ್ಲ ಎಂದು ಎಂ.ಬಿ. ಪಾಟೀಲ ಹೇಳಿದ್ರು. ಸಿಂದಗಿ ಮತಕ್ಷೇತ್ರದ ಜನತೆ ನನ್ನನೂ ಮುಂದಿನ ಬಾರಿ ಎಂಎಲ್‌ಎ ಮಾಡುತ್ತಾರೆ ನಿಮ್ಮಿಂದ ತಡೆಯೋಕೆ ಆಗಲ್ಲ ಎಂದು ಮಂಜುಳಾ ಎಂ.ಬಿ‌.ಪಾಟೀಲ ರಿಗೆ ಟಾಂಗ್ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಗಣಿನಾಡಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ