ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಟಿಕೆಟ್ ಮಾಚ್ ಫಿಕ್ಸ್ಂಗ್ ಆಗಿದೆ. ಇದು ಸ್ವತಃ ಬಿಜೆಪಿಯ ಮುಖಂಡರೇ ಹೇಳಿಕೆ ನೀಡುತ್ತಿರೋದು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಣದಿಂದ ಹಿಂದಕ್ಕೆ ಸರಿದಿರೋ ಶಿರಾ ಕ್ಷೇತ್ರದ ಬಿ.ಕೆ.ಮಂಜುನಾಥ್ ಇಂತಹ ಬಾಂಬ್ ಸಿಡಿಸಿದ್ದಾರೆ. ಎರಡನೇ ಪಟ್ಟಿಯಲ್ಲಿ ನನಗೆ ಟಿಕೆಟ್ ಘೋಷಣೆ ಮಾಡಿದ್ರು. ಬಿ ಫಾರಂ ನೀಡಲು ಹಿಂದೇಟು ಹಾಕಿದ್ರು. ಬೆಂಗಳೂರಿಗೆ ಅಲೆದರೂ ನನಗೆ ಬಿ ಪಾರಂ ನೀಡಲಿಲ್ಲ. ಯಡಿಯೂರಪ್ಪ ನವರನ್ನ ಭೇಟಿ ವೇಳೆ ಅವ್ರು ಮೌನದಿಂದಿದ್ರು.
ಆಗ ನಾನು ನನ್ನ ಆತ್ಮೀಯರೊಂದಿಗೆ ಚರ್ಚೆ ಮಾಡಿದೆ. ನನ್ನ ವಿರುದ್ಧ ಎಸ್. ಆರ್. ಗೌಡ ಬೆಂಬಲಿಗರು ಪ್ರತಿಭಟನೆ ಮಾಡಿದ್ರು. ಇದರಿಂದಾಗಿ ಕುಟುಂಬದವರು ಹಾಗೂ ಸ್ನೇಹಿತರು ಸ್ಪರ್ಧೆ ಮಾಡಬೇಡಿ ಎಂದು ಸೂಚಿಸಿದರು. ಹಾಗಾಗಿ ನಾನು ಕಣದಿಂದ ಹಿಂದೆ ಸರಿಯುತಿದ್ದೇನೆ ಅಂದ್ರು. ಈಗಲೂ ನಾನು ಬಿಜೆಪಿಯಲ್ಲಿದ್ದೇನೆ. ನಾನು ಜಿಲ್ಲೆಯ ಹಿಂದುಳಿದ ವರ್ಗದ ನಾಯಕನಾಗಿದ್ದೇನೆ. ಕಷ್ಟಪಟ್ಟು ಪಕ್ಷ ಬೆಳೆಸಿದ್ದೇನೆ. ಆದರೆ ಜಿಲ್ಲೆಯ ನಾಯಕರು ನನಗೆ ತೊಂದ್ರೆ ಕೊಡ್ತಿದ್ದಾರೆ. ಜಿಲ್ಲೆಯ ಬಿಜೆಪಿ ನಾಯಕರು ಟಿಕೆಟ್ ಹಂಚಿಕೆ ಮಾಡಿ ಮಾರಿಕೊಂಡಿದ್ದಾರೆ.
ಕೆಲವರು ನಮ್ಮವರೆ ನಮ್ಮನ್ನ ಸೋಲಿಸಲು ಹುನ್ನಾರ ನಡೆಸಿದ್ರು. ಶಿರಾದಲ್ಲಿ ಪ್ರಭಾವಿ ರಾಜಕಾರಿಣಿಗಳ ಮುಂದೆ ಸಾಕಷ್ಟು ಕಷ್ಟ ಪಟ್ಟು ಪಕ್ಷ ಬೆಳೆಸಿದ್ದೇನೆ. ನನಗೆ ಬಿ ಪಾರಂ ವಿಳಂಬವಾಗಲು ಜಿಲ್ಲೆಯ ನಾಯಕರೇ ನೇರ ಕಾರಣ. ಜಿಲ್ಲೆಯಲ್ಲಿ ಕುರುಬ ಸಮಾಜವನ್ನ ಅವಮಾನಿಸಿದ್ದಾರೆ. ಹುಲಿನಾಯ್ಕರ್ ಅವರನ್ನೂ ಬಲಿ ಕೊಡಲು ಮುಂದಾಗಿದ್ದಾರೆ.
ತಮ್ಮ ತೆವಲಿಗಾಗಿ ನಮ್ಮ ಸಮಾಜವನ್ನ ಹಾಗೂ ನಾಯಕರನ್ನ ಬಲಿ ಕೊಡ್ತಿದ್ದಾರೆ. ಇವರ ಪಾಪ ಕೃತ್ಯಗಳನ್ನ ನಾನು ಎಲ್ಲರ ಮುಂದೆ ಬಹಿರಂಗ ಪಡಿಸುವೆ ಅಂತಾ ಮಾಜಿ ಸಂಸದ ಜಿ. ಎಸ್. ಬಸವರಾಜ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಜಿ .ಎಸ್. ಬಸವರಾಜ ಟಿಕೆಟ್ ಗಳನ್ನ ಮಾರಾಟ ಮಾಡಿಕೊಂಡಿದ್ದಾರೆ.
ಬೇರೆ ಪಕ್ಷಗಳೊಂದಿಗೆ ಮ್ಯಾಚ್ ಪಿಕ್ಸಿಂಗ್ ಮಾಡ್ಕೊಂಡಿದ್ದಾರೆ. ನಾನು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಲ್ಲ ಎಂದು ಪಕ್ಷದ ಹಿರಿಯ ನಾಯಕರಿಗೆ ಟಾಂಗ್ ನೀಡಿದ್ದಾರೆ. ಅಲ್ಲದೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡ ಬಿ ಫಾರಂ ನೀಡುವಲ್ಲಿ ಮೋಸ ಮಾಡಿದ್ದಾರೆ ಅಂತಾ ಆರೋಪಿಸಿದ್ದಾರೆ.