Select Your Language

Notifications

webdunia
webdunia
webdunia
webdunia

ಮೋದಿ ಕೇವಲ ಮಾತಿನ ಶೂರ, ಸಾಧನೆ ಶೂನ್ಯ: ಮಾಯವತಿ ವಾಗ್ದಾಳಿ

ಮೋದಿ ಕೇವಲ ಮಾತಿನ ಶೂರ, ಸಾಧನೆ ಶೂನ್ಯ: ಮಾಯವತಿ ವಾಗ್ದಾಳಿ
ಮೈಸೂರು , ಗುರುವಾರ, 26 ಏಪ್ರಿಲ್ 2018 (17:35 IST)
ಕೇಂದ್ರ ಸಕಾ೯ರ ಭ್ರಷ್ಟಾಚಾರಕ್ಕೆ ಬೆನ್ನಾಗಿ ನಿಂತಿರುವುದರಿಂದ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಳವಾಗುತ್ತಿದೆ. ಇದನ್ನು ನಿಯಂತ್ರಿಸಲಾಗದೇ ಪ್ರಧಾನಿ ಮೋದಿ ಮಾತಿನ ಶೂರತ್ವದಲ್ಲಿ  ತಮ್ಮ ಆಡಳಿತ ಮುಗಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಮಾಜಿ  ಮುಖ್ಯಮಂತ್ರಿ ಮಾಯಾವತಿ ವಾಗ್ದಾಳಿ ನಡೆಸಿದರು.
ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಎಸ್ ಪಿ ಹಾಗೂ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಭ್ರಷ್ಟಾಚಾರ ನಿರ್ಮೂಲನೆಗೆ ನಿಗಾ ವಹಿಸುತ್ತಿಲ್ಲ. ಭ್ರಷ್ಟರಿಗೆ ಪ್ರೋತ್ಸಾಹ ನೀಡುತ್ತಿದೆ. ನೀರವ್ ಮೋದಿ,  ಲಲಿತ್ ಮೋದಿ,  ವಿಜಯ್ ಮಲ್ಯ ದೇಶ ಕೊಳ್ಳೆ ಹೊಡೆದು ದೇಶ ತೊರೆದಿರುವುದೇ ಸಾಕ್ಷಿ ಎಂದು ಕಿಡಿಕಾರಿದರು.
 
ಮೋದಿ ಪ್ರಧಾನಿಯಾಗುವ ಮುನ್ನ ದೇಶದ ಜನಕ್ಕೆ ಆಶಾಗೋಪುರ ಕಟ್ಟಿದ್ದರು. ಕಾಳಧನ ತರುತ್ತೇವೆ. ಭ್ರಷ್ಟಾಚಾರ ನಿಮೂ೯ಲನೆ ಮಾಡುತ್ತೇನೆ. ಬಡವರ ಖಾತೆಗೆ ಹಣ ಹಾಕುತ್ತೇನೆ. ಅಚ್ಛೆ ದಿನ ಬರುತ್ತದೆ ಎಂದ್ದಿದ್ದರು. ಆದರೆ, ದೇಶದ ಅಭಿವೃದ್ಧಿ ಆಗಿಲ್ಲ, ಮೋದಿ ನಂಬಿದ ಉದ್ಯಮಿಗಳು ದಿನೇ ದಿನೇ ಶ್ರೀಮಂತರಾಗುತ್ತಿದ್ದಾರೆ. ಇದು ಶ್ರೀಮಂತರ ಅಭಿವೃದ್ದಿ ಸಕಾ೯ರವೆಂದು ಗುಡುಗಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವೆಂಕಯ್ಯ ನಾಯ್ಡು ಮಂಗಳೂರು ನಲ್ಲಿ ವಾಸ್ತವ್ಯ ಮಾಡುತ್ತಿರುವುದು ಯಾಕೆ?ಕಾಂಗ್ರೆಸ್ ಕಿಡಿ