ವರುಣಾದಲ್ಲಿ ವಿಜಯೇಂದ್ರಗೆ ಬಿಜೆಪಿ ಟಿಕೆಟ್ ಮಿಸ್ ಆದ ಹಿನ್ನೆಲೆಯಲ್ಲಿ ಆಕ್ರೋಶ ಭುಗಿಲೇಳುತ್ತಿದೆ. ಇದು ವಿಜಯೇಂದ್ರಗೆ ಟಿಕೆಟ್ ಮಿಸ್ ಆದ ಎಫೆಕ್ಟ್.? ಎಂದೇ ಹೇಳಲಾಗುತ್ತಿದೆ.
ವರುಣಾದಲ್ಲಿ ಬಿಜೆಪಿ ಸೋಲಿಸಲು ಸ್ವಪಕ್ಷಿಯರಿಂದಲೇ ಪ್ಲ್ಯಾನ್ ರೂಪಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಚುನಾವಣೆಯಲ್ಲಬಿಜೆಪಿ ವಿರುದ್ಧ ನೋಟಾ ಚಲಾಯಿಸಲು ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.
ಖಟ್ಟರ್ ಬಿಜೆಪಿ ಕಾರ್ಯಕರ್ತರಿಂದ ನೋಟಾ ಚಲಾಯಿಸಲು ನಿರ್ಧಾರ ಮಾಡಲಾಗಿದೆ ಎಂಬ ವದಂತಿ ಹರಿದಾಡುತ್ತಿದೆ. ಅತೀ ಹೆಚ್ಚು ನೋಟಾ ಚಲಾವಣೆ ಆದರೆ ಮರುಚುನಾವಣೆ ಆಗಬಹುದೆಂಬ ಎಣಿಕೆ ಇದರ ಹಿಂದಿದೆ. ಈ ಸಾಧ್ಯತೆ ನಿರೀಕ್ಷಿಸಿ ಅತೀ ಹೆಚ್ಚು ನೋಟಾ ಚಲಾಯಿಸಲು ಚಿಂತನೆ ನಡೆಸಲಾಗುತ್ತಿದೆ. ಬಿಜೆಪಿಯ ಶೇಖಡವಾರು ಕಾರ್ಯಕರ್ತರು ನೋಟಾ ಚಲಾಯಿಸುವಂತೆ ಸೂಚನೆ ನೀಡುತ್ತಿದ್ದಾರೆ.
ವಿಜಯೇಂದ್ರಗೆ ಟಿಕೆಟ್ ಮಿಸ್ ಆಗಿದ್ದಕ್ಕೆ ಪಕ್ಷಕ್ಕೆ ಬುದ್ದಿ ಕಲಿಸಲು ಕಾರ್ಯಕರ್ತರು ಮುಂದಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೋಟಾ ಚಲಾವಣೆ ವಿಚಾರ ಚರ್ಚೆಗೆ ಗ್ರಾಸವಾಗುತ್ತಿದೆ.