Select Your Language

Notifications

webdunia
webdunia
webdunia
webdunia

ರಾಷ್ರ್ಟೀಯ ಸಮಾರಂಭದಲ್ಲಿ ಅವಿವೇಕಿಯಂತೆ ವರ್ತಿಸಿದ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ

webdunia
ಭಾನುವಾರ, 9 ಸೆಪ್ಟಂಬರ್ 2018 (06:38 IST)
ಇಸ್ಲಾಮಾಬಾದ್ : ಪಾಕ್ ನ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ರಾಷ್ರ್ಟೀಯ ಸಮಾರಂಭವೊಂದರಲ್ಲಿ ತಂಬಾಕು ಸೇವಿಸಿ ಸಿಕ್ಕಿಬೀಳುವುದರ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.


ಪಾಕಿಸ್ತಾನದ ರಕ್ಷಣಾ ದಿವಸ್ ಕಾರ್ಯಕ್ರಮ ಸೆ.6 ರ ಗುರುವಾರದಂದು ರಾವಲ್ಪಿಂಡಿಯಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು. ಈ ಸಮಾರಂಭದಲ್ಲಿ ಭಾಗವಹಿಸಿದ್ದ ಅಫ್ರಿದಿ ಯಾರಿಗೂ ತಿಳಿದಂತೆ ತಂಬಾಕು ಸೇವನೆ ಮಾಡಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.


ಅಫ್ರಿದಿ ತಂಬಾಕು ಸೇವಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಕುರಿತು ಟ್ವೀಟಿಗರು ಅಫ್ರಿದಿಯನ್ನು ಟ್ರೋಲ್ ಮಾಡಿದ್ದಾರೆ. ರಕ್ಷಣಾ ಕಾರ್ಯಕ್ರಮದಲ್ಲಿ ಉನ್ನತ ರಕ್ಷಣಾ ಅಧಿಕಾರಿಗಳು ಹಾಗೂ ಪೊಲೀಸರ ಪಕ್ಕದಲ್ಲೇ ಕುಳಿತು ಅಫ್ರಿದಿ ಈ ರೀತಿ ವರ್ತಿಸಿರುವುದರ ವಿರುದ್ಧ ಬೇಸರ ವ್ಯಕ್ತಪಡಿಸಿ ಕಿಡಿಕಾರಿದ್ದಾರೆ. ಕೆಲವರು ಅಫ್ರಿದಿ ಕಾಲೆಳೆದು ರೀ ಟ್ವೀಟ್ ಮಾಡಿದ್ದಾರೆ.   


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia Hindi

ಮುಂದಿನ ಸುದ್ದಿ

ಏರೋ ಇಂಡಿಯಾ ಶಿಫ್ಟ್ ಆಗಲ್ಲ: ಕೇಂದ್ರದ ಸ್ಪಷ್ಟನೆ