ಪಬ್ಲಿಕ್ ಸ್ಥಳದಲ್ಲಿ ಕಿಸ್ ಮಾಡಿದ ಪ್ರೇಮಿಗಳಿಗೆ ಆದ ಗತಿ ಏನು ಗೊತ್ತಾ...?

ಶುಕ್ರವಾರ, 17 ಆಗಸ್ಟ್ 2018 (13:33 IST)
ಇಸ್ಲಾಮಾಬಾದ್ : ಸಾರ್ಜಜನಿಕ ಸ್ಥಳದಲ್ಲಿ ನಾಚಿಕೆಯಿಲ್ಲದೆ ಅಪ್ಪಿಕೊಂಡು ಕಿಸ್ ಮಾಡುತ್ತಿರುವ ಜೋಡಿಗಳನ್ನು ಇಸ್ಲಾಮಾಬಾದ್ ಪೊಲೀಸರು ಬಂದಿಸಿದ್ದಾರೆ.


18-19 ವರ್ಷದ ಯುವಕ ಹಾಗೂ ಯುವತಿ ಸಾರ್ಜಜನಿಕ ಸ್ಥಳದಲ್ಲಿ ಕಾರು ನಿಲ್ಲಿಸಿ ಯಾರ ಭಯವಿಲ್ಲದೇ ಅಪ್ಪಿಕೊಂಡು ಚುಂಬನ ಮಾಡಿದ್ದಾರೆ. ಸಾರ್ಜಜನಿಕ ಸ್ಥಳದಲ್ಲಿ ಈ ಜೋಡಿ ಹೀಗೆ ಮಾಡುತ್ತಿರುವದನ್ನ ನೋಡಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರೂ ಕೂಡ ಅದನ್ನು ಗಮನಿಸದ ಈ ಜೋಡಿ ತಮ್ಮ ಕಾರ್ಯದಲ್ಲಿಯೇ ನಿರತರಾಗಿದ್ದರು.


ನಂತರ ಪೊಲೀಸರು ಈ ಜೋಡಿಯನ್ನು ಬಂಧಿಸಿ ಅಶ್ಲೀಲ ಕೃತ್ಯಗಳ ಕಾಯ್ದೆ ಅಡಿ ಕೇಸ್​ ದಾಖಲಿಸಿದ್ದಾರೆ. ಇದೀಗ ಈ ಜೋಡಿ ಜಾಮೀನು ಪಡೆದುಕೊಂಡಿದ್ದಾರೆ. ಆದರೆ ಪೊಲೀಸರು ಹಾಕಿರುವ ಈ ಕೇಸ್ ಸಾಬೀತಾದರೆ ಈ ಯುವ ಜೋಡಿ ಮೂರು ತಿಂಗಳು ಜೈಲುವಾಸ ಅಥವಾ ದಂಡ ಇಲ್ಲವೇ ಇವೆರಡನ್ನೂ ಅನುಭವಿಸಬೇಕಾಗುತ್ತದೆ ಎಂದು ಅಲ್ಲಿನ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಗಲಿದ ಅಟಲ್ ಪಾಕ್ ನಲ್ಲೂ ಎಷ್ಟು ಜನಪ್ರಿಯತೆ ಇದೆ ಎನ್ನುವುದು ಈ ಮೂಲಕ ಜಾಹೀರು!