ಅಗಲಿದ ಅಟಲ್ ಪಾಕ್ ನಲ್ಲೂ ಎಷ್ಟು ಜನಪ್ರಿಯತೆ ಇದೆ ಎನ್ನುವುದು ಈ ಮೂಲಕ ಜಾಹೀರು!

ಶುಕ್ರವಾರ, 17 ಆಗಸ್ಟ್ 2018 (11:59 IST)
ನವದೆಹಲಿ: ನಿನ್ನೆ ನಮ್ಮನ್ನಗಲಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೆ ಅಂತಿಮ ನಮನ ಸಲ್ಲಿಸಲು ಪಾಕಿಸ್ತಾನ, ಭೂತಾನ್ ನಿಂದ ನಾಯಕರು ಆಗಮಿಸುತ್ತಿದ್ದಾರೆ.
 

ಪಾಕಿಸ್ತಾನದ ಕಾನೂನು ಸಚಿವರ ನೇತೃತ್ವದಲ್ಲಿ ನಿಯೋಗವೊಂದು ದೆಹಲಿಗೆ ಭೇಟಿ ನೀಡಿ ಅಟಲ್ ಬಿಹಾರಿ ವಾಜಪೇಯಿಗೆ ಅಂತಿಮ ನಮನ ಸಲ್ಲಿಸಲಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಎಂಥದ್ದೇ ವೈಮನಸ್ಯವಿದ್ದರೂ ಭಾರತದ ನಾಯಕನಿಗೆ ಆ ದೇಶದ ನಾಯಕರು ಗೌರವ ಸಲ್ಲಿಸುತ್ತಿರುವುದು ಅಟಲ್ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಇನ್ನೊಂದೆಡೆ ಭೂತಾನ್ ದೇಶದ ದೊರೆ ಜಿಗ್ಮೆ ಕೇಸರ್ ಕೂಡಾ ಭಾರತಕ್ಕೆ ಆಗಮಿಸಿ ವಾಜಪೇಯಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಇದರೊಂದಿಗೆ ವಾಜಪೇಯಿ ಅವರು ನೆರೆಯ ರಾಷ್ಟ್ರಗಳೊಂದಿಗೆ ಹೊಂದಿದ್ದ ಸ್ನೇಹ ಸಂಬಂಧಕ್ಕೆ ನಿಜವಾದ ಅರ್ಥ ಬಂದಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಾಜಪೇಯಿ ಅಂತ್ಯಕ್ರಿಯೆ ನಡುವೆಯೂ ಕೇರಳಕ್ಕೆ ಧಾವಿಸಲಿರುವ ಪ್ರಧಾನಿ ಮೋದಿ