ವ್ಯಂಗ್ಯವಾಗಿ ಟ್ವೀಟ್ ಮಾಡಿದ ವ್ಯಕ್ತಿಗೆ ಗರಂ ಆಗಿ ತಿರುಗೇಟು ನೀಡಿದ ಸಾನಿಯಾ ಮಿರ್ಜಾ

ಬುಧವಾರ, 15 ಆಗಸ್ಟ್ 2018 (08:47 IST)
ನವದೆಹಲಿ : ಪಾಕ್ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ ಪತ್ನಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ವ್ಯಕ್ತಿಯೊಬ್ಬ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಗೆ ಟ್ವೀಟ್​ ಮೂಲಕ ವ್ಯಂಗ್ಯವಾಗಿ ಶುಭಾಷಯ ಕೋರಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ  ಸಾನಿಯಾ ಆ ವ್ಯಕ್ತಿಗೆ ಗರಂ ಆಗಿ  ತಿರುಗೇಟು ನೀಡಿದ್ದಾರೆ.


ಪಾಕಿಸ್ತಾನವು ಆ. 14ರಂದು ಅಂದರೆ ನಿನ್ನೆ ಸ್ವಾತಂತ್ರ್ಯೋತ್ಸವ ಆಚರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಸಾನಿಯಾಗೆ 'ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ನಿಮ್ಮ ಸ್ವಾತಂತ್ರ್ಯ ದಿನ ಇಂದೇ ಅಲ್ಲವೇ?' ಎಂದು ಟ್ವೀಟ್​ ಮಾಡಿದ್ದಾನೆ.


ಇದಕ್ಕೆ ತಿರುಗೇಟು ನೀಡಿದ ಸಾನಿಯಾ 'ಅಲ್ಲ, ನಾನು ಮತ್ತು ನನ್ನ ದೇಶದ ಜನತೆ ಸ್ವಾತಂತ್ರ್ಯ ದಿನವನ್ನು ನಾಳೆ (ಆ.15) ಆಚರಿಸುತ್ತೇವೆ. ಇಂದು (ಆ.14) ನನ್ನ ಪತಿ ಹಾಗೂ ಅವರ ದೇಶದವರು ಸ್ವಾತಂತ್ರ್ಯ ದಿನ ಆಚರಣೆ ಮಾಡುತ್ತಾರೆ. ಹಾಗೆಯೇ ನೀವು ಕನ್ಫ್ಯೂಸ್ ಅನಿಸುತ್ತಿದೆ. ನೀವು ಯಾವಾಗ ಆಚರಿಸುತ್ತೀರಾ.? ಎಂದು ಪ್ರಶ್ನಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆಯುಷ್ಮಾನ ಭಾರತ್ ಯೋಜನೆ ಘೋಷಿಸಿದ ಪ್ರಧಾನಿ ಮೋದಿ