Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಆಟಗಾರ ಮೊಸದ್ದೀಕ್ ಹುಸೇನ್ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲು

ಕ್ರಿಕೆಟ್ ಆಟಗಾರ ಮೊಸದ್ದೀಕ್ ಹುಸೇನ್ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲು
ಢಾಕಾ , ಮಂಗಳವಾರ, 28 ಆಗಸ್ಟ್ 2018 (10:07 IST)
ಢಾಕಾ : ಬಾಂಗ್ಲಾ ದೇಶದ ಕ್ರಿಕೆಟ್ ಆಟಗಾರ ಮೊಸದ್ದೀಕ್ ಹುಸೇನ್ ತಮ್ಮ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆಂದು ಅವರ ವಿರುದ್ಧ ದೂರು ದಾಖಲಾಗಿದೆ.


ಬಾಂಗ್ಲಾ ದೇಶದ ಕ್ರಿಕೆಟ್​ ತಂಡದ ಆಟಗಾರ ಮೊಸದ್ದೀಕ್​ ಹುಸೇನ್​,  ಶರ್ಮಿನ್ ಸಮಿರಾ ಉಷಾ ಅವರನ್ನ ಕಳೆದ ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆವಾಗಿನಿಂದಲೂ ವರದಕ್ಷಿಣೆ ವಿಚಾರವಾಗಿ ತಮ್ಮ ಪತ್ನಿಗೆ ತೊಂದರೆ ನೀಡುತ್ತಿದ್ದು, ಪತ್ನಿ ಬಳಿ  8 ಲಕ್ಷ ರೂಪಾಯಿಗಳಿಗಾಗಿ ಡಿಮ್ಯಾಂಡ್ ಮಾಡುತ್ತಿದ್ದಾರಂತೆ.


ಈ ಕುರಿತಾಗಿ ಮೊಸದ್ದೀಕ್​ ಹುಸೇನ್ ವಿರುದ್ಧ ಗಂಭೀರ  ಆರೋಪ ಮಾಡಿದ ಅವರ ಪತ್ನಿ ಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ನ್ಯಾಯಾಧೀಶ ರೋಸಿನಾ ಖಾನ್​, ಈ ಬಗ್ಗೆ ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಬ್ಯಾಟ್ಸಮನ್​ ಮೊಸದ್ದೀಕ್​ ಹುಸೇನ್​ ಈಗಾಗಲೇ ಮುಂಬರುವ ಏಷ್ಯಾಕಪ್​ ಕ್ರಿಕೆಟ್​ ಟೂರ್ನಿಗೆ ಆಯ್ಕೆಗೊಂಡಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಭೇಟಿಗೆ ಕಾಯುತ್ತಿರುವ ರಾಜ್ಯ ಕಾಂಗ್ರೆಸ್