Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಭೇಟಿಗೆ ಕಾಯುತ್ತಿರುವ ರಾಜ್ಯ ಕಾಂಗ್ರೆಸ್

ರಾಹುಲ್ ಗಾಂಧಿ ಭೇಟಿಗೆ ಕಾಯುತ್ತಿರುವ ರಾಜ್ಯ ಕಾಂಗ್ರೆಸ್
ಬೆಂಗಳೂರು , ಮಂಗಳವಾರ, 28 ಆಗಸ್ಟ್ 2018 (08:45 IST)
ಬೆಂಗಳೂರು: ಆಷಾಢ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಎಂದು ಈ ಮೊದಲೇ ತೀರ್ಮಾನವಾದಂತೆ ಕಾಂಗ್ರೆಸ್ ತನ್ನ ಚಟುವಟಿಕೆ ಆರಂಭಿಸಲು ಚಿಂತನೆ ನಡೆಸಿದೆ.

ರಾಜ್ಯ ಮೈತ್ರಿ ಸರ್ಕಾರದ ಮತ್ತೊಂದು ಸುತ್ತಿನ ಸಚಿವ ಸಂಪುಟ ವಿಸ್ತರಣೆ ಕಾರ್ಯ ಸೆ.15 ರ ಬಳಿಕ ಪೂರ್ಣಗೊಳ‍್ಳಲಿದೆ ಎನ್ನಲಾಗಿದೆ. ಇದಕ್ಕಾಗಿ ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರು ಪಟ್ಟಿ ಅಂತಿಮಗೊಳಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಹೀಗಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಗೆ ಸಮಯ ಕೋರಿದ್ದಾರೆ. ಸೆ.5 ರೊಳಗಾಗಿ ರಾಹುಲ್ ಜತೆ ಚರ್ಚಿಸಿ ಪಟ್ಟಿ ಅಂತಿಮಗೊಳಿಸುವ ಇರಾದೆಯಲ್ಲಿ ಕಾಂಗ್ರೆಸ್‍ ನಾಯಕರಿದ್ದಾರೆ. ಈ ಬಾರಿ ಹಿರಿಯ ನಾಯಕರಾದ ಎಚ್ ಕೆ ಪಾಟೀಲ್, ರಾಮಲಿಂಗಾ ರೆಡ್ಡಿ ಮುಂತಾದವರಿಗೆ ಸಚಿವ ಸ್ಥಾನ ನೀಡಲು ಭಾರೀ ಕಸರತ್ತು ನಡೆದಿದೆ ಎನ್ನಲಾಗಿದೆ. ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಜತೆ ಈ ಕುರಿತು ಚರ್ಚೆ ನಡೆಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯಗೆ ನಗುತ್ತಲೇ ಟಾಂಗ್ ಕೊಟ್ಟ ಎಚ್ ಡಿ ದೇವೇಗೌಡರು