ಪ್ರವಾಹ ಪೀಡಿತ ಕೊಡವರಿಗೆ ಈಗ ಮತ್ತೊಂದು ಭೀತಿ!

ಸೋಮವಾರ, 27 ಆಗಸ್ಟ್ 2018 (10:45 IST)
ಕೊಡಗು: ಜಲ ಪ್ರಳಯದಿಂದಾಗಿ ಮನೆ ಮಠ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಂದಿರುವ ಕೊಡವ ಜನರಿಗೆ ಇದೀಗ ಮತ್ತೊಂದು ಭೀತಿ ಶುರುವಾಗಿದೆ.

ಪ್ರವಾಹದ ನಂತರ ಸಾಮಾನ್ಯವಾಗಿ ಬರುವ ಖಾಯಿಲೆ ಭೀತಿ ಇಲ್ಲಿನ ಜನರಿಗೆ ಈಗ ಶುರುವಾಗಿದೆ. ಅದರಲ್ಲೂ ವಿಶೇಷವಾಗಿ ಡೆಂಘೀ ಜ್ವರ ಹರಡುವ ಸೊಳ್ಳೆಗಳು ಪತ್ತೆಯಾಗಿದ್ದು, ಪ್ರಾಣಾಂತಿಕ ಡೆಂಘೀ ಜ್ವರದ ಭೀತಿ ಸಂತ್ರಸ್ತರಿಗೆ ಆವರಿಸಿದೆ.

ಹೀಗಾಗಿ ನಿರಾಶ್ರಿತರ ಶಿಬಿರದಲ್ಲಿರುವ ಮತ್ತು ಇತರರಿಗೆ ಯಾವುದೇ ಆರೋಗ್ಯ ತೊಂದರೆಯಾಗದಂತೆ ಅಗತ್ಯ ಮುನ್ನಚ್ಚರಿಕೆಗಳನ್ನು ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಕೈಗೊಳ್ಳುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೋದಿ ನೇತೃತ್ವದ ಸುಳ್ಳಿನ ಸರ್ಕಾರವನ್ನು ಕಿತ್ತೊಗೆಯಬೇಕು: ದಿನೇಶ್ ಗುಂಡೂರಾವ್