Select Your Language

Notifications

webdunia
webdunia
webdunia
webdunia

ಮತ್ತೆ ಕೊರೋನಾ ಆತಂಕ ! ಪಾಸಿವಿಟಿ ದರ ಏರಿಕೆ

ಮತ್ತೆ ಕೊರೋನಾ ಆತಂಕ ! ಪಾಸಿವಿಟಿ ದರ ಏರಿಕೆ
ಬೆಂಗಳೂರು , ಸೋಮವಾರ, 30 ಮೇ 2022 (08:26 IST)
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು 3 ತಿಂಗಳ ಬಳಿಕ 250 ಆಸುಪಾಸಿಗೆ ಹೆಚ್ಚಳವಾಗಿದ್ದು, ಸಕ್ರಿಯ ಸೋಂಕು ಪ್ರಕರಣಗಳು ಎರಡು ಸಾವಿರ ಗಡಿದಾಟಿವೆ.

ಭಾನುವಾರ 241 ಮಂದಿಗೆ ಸೋಂಕು ತಗುಲಿದ್ದು, 98 ಮಂದಿ ಗುಣಮುಖರಾಗಿದ್ದಾರೆ. ಸತತ 11ನೇ ದಿನ ಸೋಂಕಿತರ ಸಾವು ವರದಿಯಾಗಿಲ್ಲ. ಗುಣಮುಖರ ಸಂಖ್ಯೆ ಕುಸಿತದ ಕಾರಣ ಸಕ್ರಿಯ ಪ್ರಕರಣ ಸಂಖ್ಯೆ 2041ಕ್ಕೇರಿದೆ. ಇವರು ಈಗ ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಮನೆ ಆರೈಕೆಯಲ್ಲಿದ್ದಾರೆ.

ಸೋಂಕು ಪರೀಕ್ಷೆಗಳು 18 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ 0.95 ದಾಖಲಾಗಿದೆ. ಶನಿವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಎರಡೂವರೆ ಸಾವಿರ ಇಳಿಕೆಯಾಗಿವೆ.

ಆದರೂ, ಹೊಸ ಪ್ರಕರಣಗಳು 45 ಹೆಚ್ಚಳವಾಗಿವೆ. (ಶನಿವಾರ 196 ಪ್ರಕರಣಗಳು, ಸಾವು ಶೂನ್ಯ). ಬೆಂಗಳೂರು 232, ದಕ್ಷಿಣ ಕನ್ನಡ 4, ತುಮಕೂರು 3, ಬೆಳಗಾವಿ ಇಬ್ಬರಿಗೆ ಸೋಂಕು ತಗುಲಿದೆ. 26 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

500 ಅಡಿ ಆಳ ಪ್ರಪಾತಕ್ಕೆ ಬಿದ್ದ ಕಾರು: 5 ಪ್ರವಾಸಿಗರು ದುರ್ಮರಣ