Select Your Language

Notifications

webdunia
webdunia
webdunia
webdunia

ಶಂಕಿತ ಟೊಮ್ಯಾಟೊ ವೈರಸ್ ಪತ್ತೆ..!

Suspected tomato virus detected
bangalore , ಮಂಗಳವಾರ, 17 ಮೇ 2022 (19:32 IST)
ಕೊರೋನಾ ಬೆನ್ನಲ್ಲೇ ರಾಜ್ಯಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿ ಕೊಟ್ಟಿದ್ದು, ಕೇರಳದಲ್ಲಿ ಕಂಡುಬಂದ ಮಹಾಮಾರಿ ರಾಜ್ಯಕ್ಕೂ ಪ್ರವೇಶಿಸುವ ಭೀತಿ ಹೆಚ್ಚಾಗಿದೆ..ನಾಲ್ಕು ವರ್ಷದ ಮಗುವಿಗೆ ಶಂಕಿತ ಟೊಮ್ಯಾಟೊ ಜ್ವರ ತಗುಲಿರುವ ಶಂಕೆ ವ್ಯಕ್ತವಾಗಿದೆ..ಕೇರಳ ಗಡಿಭಾಗದ ಉಡುಪಿ ಜಿಲ್ಲೆಯಲ್ಲಿ ಟೊಮ್ಯಾಟೊ ವೈರಸ್ ಕಂಡುಬಂದಿದ್ದು, ಸೋಂಕಿತ ಮಗುವನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಂಕಿತ ವೈರಸ್ ಪತ್ತೆಯಾದ ಹಿನ್ನೆಲೆ ರಾಜ್ಯದ ಗಡಿಭಾಗದಲ್ಲಿ ನಿಗಾವಹಿಸಲಾಗಿದೆ ಎಂದು ಹೇಳಲಾಗಿದೆ..ಇನ್ನು, ಶಂಕಿತ ಟೊಮ್ಯಾಟೊ ವೈರಸ್ ಕಾಣಿಸಿಕೊಂಡಿದೆ ಆದರೆ, ಆತಂಕಪಡುವ ಅಗತ್ಯವಿಲ್ಲ. ಶಂಕಿತ ವೈರಸ್ ಪತ್ತೆಯಾದ ಹಿನ್ನೆಲೆ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

24 ಗಂಟೆಯಲ್ಲಿ ಕೊಲೆಗಡುಕರು ಅಂದರ್