Select Your Language

Notifications

webdunia
webdunia
webdunia
webdunia

24 ಗಂಟೆಯಲ್ಲಿ ಕೊಲೆಗಡುಕರು ಅಂದರ್

webdunia
hubali , ಮಂಗಳವಾರ, 17 ಮೇ 2022 (19:30 IST)
ಹುಬ್ಬಳ್ಳಿಯ ನೂಲ್ವಿ ಗ್ರಾಮದಲ್ಲಿ ಶಂಭು ಎಂಬಾತನ ಕೊಲೆ ಮಾಡಿದ್ದ ಕೊಲೆಗಡುಕರನ್ನ ಘಟನೆ ನಡೆದ 24ಗಂಟೆಯಲ್ಲಿ ಆರೋಪಿಗಳನ್ನ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಧವೆ ಅಕ್ಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕೊಲೆಗಡುಕ ಚಿನ್ನಪ್ಪ ಹಾಗೂ ಆತನಿಗೆ ಸಹಾಯ ಮಾಡಿದ ಶಂಭು ಅಕ್ಕಾ ಬಸವ್ವರನ್ನ ಪೊಲೀಸರು ಅರೆಸ್ಟ್​​​​ ಮಾಡಿದ್ದಾರೆ. ಅಕ್ಕನ ನಡತೆ ಬಗ್ಗೆ ಆಗಾಗ ಬೈಯುತ್ತಿದ್ದ ಸಹೋದರ ಶಂಭು ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದನೆಂದು ಕೊಲೆ ಮಾಡಲಾಗಿದೆ. ಕೊಲೆ ಮಾಡಿ ಬಟ್ಟೆ ಬದಲಾಯಿಸಿ ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ಚಿನ್ನಪ್ಪ.. ಸದ್ಯ ಚಿನ್ನಪ್ಪ & ಆತನ ಪ್ರೇಯಸಿ ಬಸವ್ವಳನ್ನು ಜೈಲಿಗೆ ಅಟ್ಟಿರುವ ಪೊಲೀಸರು ಈ ಪ್ರಕರಣ ಕುರಿತು ಪವರ್ ಟಿವಿಗೆ ಧಾರವಾಡ ಎಸ್.ಪಿ. ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರು ಡಿಕ್ಕಿ.. ಸ್ಥಳದಲ್ಲೇ 8 ಎಮ್ಮೆಗಳು ಸಾವು