Select Your Language

Notifications

webdunia
webdunia
webdunia
Tuesday, 8 April 2025
webdunia

ಮೈಸೂರು ಹುಲಿ ಬಿರುದು ಮಾಯ: ಟಿಪ್ಪು ಸುಲ್ತಾನ್‌ ಪಠ್ಯಕ್ಕೆ ಕತ್ತರಿ

tippu sultan text books mysore ಮೈಸೂರು ಟಿಪ್ಪು ಸುಲ್ತಾನ್‌ ಪಠ್ಯ ಪುಸ್ತಕ
bengaluru , ಮಂಗಳವಾರ, 17 ಮೇ 2022 (14:44 IST)
ಭಾರೀ ವಿವಾದ ಕೆರಳಿಸಿದ್ದ ಟಿಪ್ಪು ಸುಲ್ತಾನ್‌ ಪಠ್ಯದಲ್ಲಿ ನಿರೀಕ್ಷೆಯಂತೆ ರಾಜ್ಯ ಶಿಕ್ಷಣ ಇಲಾಖೆ ಕತ್ತರಿ ಆಡಿಸಿದ್ದು, ಕೇವಲ 2 ಸಾಲಿನಲ್ಲಿ ಪಾಠ ಮುಗಿಸಿದೆ.
ಸೋಮವಾರದಿಂದ ರಾಜ್ಯದಲ್ಲಿ ಶಾಲೆಗಳು ಆರಂಭವಾಗಿದ್ದು, 10ನೇ ತರಗತಿಯ ಸಮಾಜ ವಿಜ್ಞಾನ ಪಾಠದಲ್ಲಿ ಟಿಪ್ಪುಸುಲ್ತಾನ್‌ ಪಠ್ಯಕ್ಕೆ ರಾಜ್ಯ ಸರಕಾರ ಕತ್ತರಿ ಹಾಕಿದ್ದು, ಹಲವು ಮಹತ್ವದ ವಿಷಯಗಳನ್ನು ತೆಗೆದು ಹಾಕಿದೆ.
ಟಿಪ್ಪು ಸುಲ್ತಾನ್‌ ಅವರಿಗೆ ಮೈಸೂರು ಹುಲಿ ಎಂಬ ಬಿರುದು ಇದ್ದು, ಅದನ್ನು ಪಠ್ಯದಿಂದ ತೆಗೆದು ಹಾಕಲಾಗಿದೆ. ಟಿಪ್ಪು ಸುಲ್ತಾನ್‌ ಹೋರಾಟ ಹಾಗೂ ಮೈಸೂರು ಆಳ್ವಿಕೆಯ ವರದಿ ತೆಗೆದು ಹಾಕಲಾಗಿದೆ. ಅಲ್ಲದೇ ಮೈಸೂರು ಒಡೆಯ ಎಂಬ ಶಬ್ಧವನ್ನು ಕಿತ್ತು ಹಾಕಲಾಗಿದೆ.
ಟಿಪ್ಪು ಸುಲ್ತಾನ್‌ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದು ಮರೆ ಮಾಚಲಾಗಿದ್ದು, ಪಠ್ಯದಲ್ಲಿ ಬಹುವಚನ ಬದಲು ಏಕವಚನ ಪ್ರಯೋಗ ಮಾಡಲಾಗಿದೆ. ಈ ಮೂಲಕ ಟಿಪ್ಪು ವ್ಯಕ್ತಿತ್ವವನ್ನು ಮಂಕು ಮಾಡುವ ಪ್ರಯತ್ನ ನಡೆದಿದ್ದು, ಆಕ್ರೋಶ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾ ಕಾರ್ಮಿಕರಿಗೆ ವೀಸಾ ನೀಡಲು ಲಂಚ: ಕಾರ್ತಿ ಚಿದಂಬರಂಗೆ ಸಿಬಿಐ ಮತ್ತೆ ಶಾಕ್