ಕೊಲಂಬೊ : ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಕ್ಕೆ ಭಾರತದಿಂದ ಪೆಟ್ರೋಲ್ ಸರಬರಾಜು ಮಾಡಲಾಗುತ್ತಿದ್ದು, ಸದ್ಯ ಲಂಕಾ ಬಿಕ್ಕಟ್ಟಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ
ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಕೇವಲ ಒಂದು ದಿನಕ್ಕೆ ಸಾಕಾಗುವಷ್ಟು ಪೆಟ್ರೋಲ್ ಸ್ಟಾಕ್ ಇದೆ ಎಂದು ಲಂಕಾದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಹೇಳಿದ್ದರು.
ಇದೀಗ ಭಾರತದಿಂದ 2 ಹಂತಗಳಲ್ಲಿ ಪೆಟ್ರೋಲ್ ಸರಬರಾಜು ಮಾಡಲಾಗುತ್ತಿದೆ. ಈ ಕುರಿತು ಟ್ವೀಟ್ ಮಾಡಿರುವ ವಿಕ್ರಮ ಸಿಂಘೆ, ದೇಶದಲ್ಲಿ ಕೇವಲ ಒಂದು ದಿನದ ಪೆಟ್ರೋಲ್ ಸ್ಟಾಕ್ ಮಾತ್ರ ಉಳಿದಿತ್ತು. ಆದರೆ, ಭಾರತೀಯ ಕ್ರೆಡಿಟ್ ಲೈನ್ ಅಡಿಯಲ್ಲಿ ಮೇ 18 ಮತ್ತು 29 ರಂದು ಬರಲಿದೆ.
ಜೂನ್ 1 ರಂದು 2ನೇ ಹಂತವಾಗಿ 2 ಶಿಪ್ಮೆಂಟ್ ಪೆಟ್ರೋಲ್ ರಫ್ತಾಗಲಿದೆ. ಇದರಿಂದಾಗಿ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದ್ದಾರೆ.
ದೇಶದ ಪರಿಸ್ಥಿತಿ ಸರಿದೂಗಿಸಲು ಸುಮಾರು 75 ಮಿಲಿಯನ್ ಯುಎಸ್ ಡಾಲರ್ ಅವಶ್ಯವಿದೆ. ಹಾಗಾಗಿ ನಾವು ಮುಕ್ತ ಮಾರುಕಟ್ಟೆಯ ಡಾಲರ್ಗಳನ್ನು ಪಡೆಯಲು ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.