Select Your Language

Notifications

webdunia
webdunia
webdunia
Friday, 4 April 2025
webdunia

ಆಕ್ರೋಶಕ್ಕೆ ಬುಗಿಲೆದ್ದ ಜನತೆ!?

ಶ್ರೀಲಂಕಾ
ಕೊಲಂಬೊ , ಮಂಗಳವಾರ, 10 ಮೇ 2022 (12:45 IST)
ಕೊಲಂಬೊ : ಶ್ರೀಲಂಕಾದದಲ್ಲಿ ಬುಗಿಲೆದ್ದ ಜನರ ಆಕ್ರೊಶದಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ.
 
ಇದರಿಂದ ಆಡಳಿತ ಪಕ್ಷದ ಸಂಸದನನ್ನೇ ಬಲಿ ತೆಗೆದುಕೊಳ್ಳುವಂತೆ ಮಾಡಿದೆ. ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಈ ವಿಷಯ ಬೆಳಕಿಗೆ ಬಂದಿದೆ. ಆಡಳಿತ ಪಕ್ಷದ ಓರ್ವ ಸಂಸದ ಮೃತಪಟ್ಟಿದ್ದು, ಈ ಸಂಘರ್ಷದಲ್ಲಿ ಹತ್ತಾರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಆಡಳಿತ ಪಕ್ಷದ ಸಂಸದ ಅಮರಕೀರ್ತಿ ಅತ್ತುಕೋರಲ ಅವರು ನಿಟ್ಟಂಬುವದಲ್ಲಿ ಬರುತ್ತಿದ್ದ ವೇಳೆ, ಅವರ ಕಾರನ್ನು ತಡೆದು ಇಬ್ಬರು ವ್ಯಕ್ತಿಗಳು ಏಕಾಏಕಿ ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರು ಹತ್ತಿರದ ಕಟ್ಟಡದಲ್ಲಿ ಆಶ್ರಯ ಪಡೆಯಲು ಯತ್ನಿಸಿದ್ದಾರೆ. ಇದೇ ವೇಳೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಮಂತ್ರಣ ಪತ್ರಿಕೆಗಳನ್ನು ಹಂಚಲು ಹೋಗಿದ್ದ ಯುವತಿಗೆ ಇದೆಂಥ ಗತಿ!?