Select Your Language

Notifications

webdunia
webdunia
webdunia
webdunia

NSUI ಕಾರ್ಯಕರ್ತರ ಪ್ರತಿಭಟನೆ

nSUI activists protest
bangalore , ಬುಧವಾರ, 4 ಮೇ 2022 (19:37 IST)
545 ಪಿಎಸ್ ಐ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಅಶ್ವತ್ಥನಾರಾಯಣ ಸಹೋದರ ಹಣ ಪಡೆದಿದ್ದಾರೆ ಎಂಬ ವಿಚಾರವಾಗಿ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ NSUI ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಸಚಿವ ಅಶ್ವತ್ಥನಾರಾಯಣ ಕಚೇರಿ ಎದುರು ಪ್ರಭಟನೆ ನಡೆಸಿರುವ ಕಾರ್ಯಕರ್ತರು, ಬ್ರೀಫ್ ಕೇಸ್ ನಿಂದ ಹಣ ತೆಗೆದು ಚೆಲ್ಲಿ ಅಣಕು ಪ್ರದರ್ಶನ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಕೆಲ ಕಾರ್ಯಕರ್ತರು ಸಚಿವರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಪೊಲೀಸರು ತಡೆಯೊಡ್ಡಿದ್ದು, ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ಬಸ್ ನಲ್ಲಿ ತುಂಬಿ ಕರೆದೊಯ್ದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ವತ್ ನಾರಾಯಣ್​ ವಿರುದ್ಧ ‘ಕೈ’ ಪ್ರತಿಭಟನೆ