Select Your Language

Notifications

webdunia
webdunia
webdunia
webdunia

ಸಚಿವರ ಮನೆಗೆ ಬಿಗಿ ಬಂದೋಬಸ್ತ್

ಸಚಿವರ ಮನೆಗೆ ಬಿಗಿ ಬಂದೋಬಸ್ತ್
bangalore , ಗುರುವಾರ, 28 ಏಪ್ರಿಲ್ 2022 (17:02 IST)
ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಪೂರ್ವಾಶ್ರಮದ ಕುರಿತು ಸಚಿವ ಸಿ.ಸಿ.ಪಾಟೀಲ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಖಂಡಿಸಿ ಭಕ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಏಪ್ರಿಲ್ 27ರೊಳಗೆ ಸಚಿವರು ತಮ್ಮ ಆರೋಪಕ್ಕೆ ವಿವರಣೆ ಒದಗಿಸಬೇಕು. ಇಲ್ಲದಿದ್ದರೆ ಅವರ ಮನೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಸಿದ್ದರು. ಅದರಂತೆ ಇಂದು ನರಗುಂದ ಪಟ್ಟಣದತ್ತ ದಿಂಗಾಲೇಶ್ವರ ಸ್ವಾಮೀಜಿಯ ಭಕ್ತರ ಸಂಚಾರ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂತು. ಶ್ರೀಗಳನ್ನು ತಡೆಯಲು ನಗರದ ಸುತ್ತಮುತ್ತಲ ಕಲಕೇರಿ, ಕುರ್ಲಗೇ ರಿ, ಅಳಗವಾಡಿ ಗ್ರಾಮಗಳ ಸಮೀಪ ಚೆಕ್ಪೋಸ್ಟ್ ನಿರ್ಮಿಸಲಾಗಿತ್ತು.. .ಶ್ರೀಗಳ ಹೋರಾಟಕ್ಕೆ ಬೆಂಬಲ ನೀಡಿ ಸಚಿವರ ಮನೆ ಮುಂದೆ ಧರಣಿ ಕೂರಲು ಹೊರಟಿದ್ದ ಹತ್ತಕ್ಕೂ ಹೆಚ್ಚು ಭಕ್ತರನ್ನು ಲಕ್ಷ್ಮೇಶ್ವರ ಪಟ್ಟಣದಲ್ಲಿ ಪೊಲೀಸರು ತಡೆ ಹಿಡಿದಿದ್ದಾರೆ..ಇನ್ನು, ಸಚಿವರ ಮನೆ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಯ್ತು.

Share this Story:

Follow Webdunia kannada

ಮುಂದಿನ ಸುದ್ದಿ

‘ಎಲ್ಲರೂ ಎಚ್ಚರಿಕೆಯಿಂದಿರಿ’- ಡಿಸಿ