Select Your Language

Notifications

webdunia
webdunia
webdunia
webdunia

‘Mr. ಸುಳ್ಳುರಾಮಯ್ಯ ರಾಜಕೀಯ ಊಸರವಳ್ಳಿ’

‘Mr. ಸುಳ್ಳುರಾಮಯ್ಯ ರಾಜಕೀಯ ಊಸರವಳ್ಳಿ’
bangalore , ಮಂಗಳವಾರ, 19 ಏಪ್ರಿಲ್ 2022 (21:14 IST)
ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ HDK ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಆಪರೇಷನ್ ಕಮಲವೆಂಬ ಅನೈತಿಕ ಕೂಸಿನ ಬೇನಾಮಿ ಅಪ್ಪ, ಪಾಪಕ್ಕೆ ಪಡೆದ ಫಲದ ಬಗ್ಗೆ ಪಲಾಯನವೇಕೆ ಸುಳ್ಳುರಾಮಯ್ಯ? ಎಂದು ಪ್ರ ಶ್ನಿಸಿದ್ದಾರೆ. ಹ್ಯೂಬ್ಲೋ ವಾಚ್ ಬಗ್ಗೆ ವಾಕರಿಕೆ ಬರುವಷ್ಟು ಹೇಸಿಗೆ ಕಥೆಗಳಿವೆ. ಈ ಎರಡೂ ಪ್ರಶ್ನೆಗಳಿಗೂ ಉತ್ತರಿಸುತ್ತಿಲ್ಲ ಯಾಕಯ್ಯಾ? ಎಂದು ಟ್ವೀಟ್ ಮಾಡಿದ್ದಾರೆ. ಜೆಡಿಎಸ್ ಬಗ್ಗೆ ಸುಳ್ಳು ಹೇಳಿದ್ದೀರಿ, ನಾಚಿಕೆ ಆಗುವುದಿಲ್ಲವೇ? ಆಪರೇಷನ್ ಕಮಲದಿಂದ ನಿಮ್ಮ ಜೇಬು ಸೇರಿದ ಆಕರ್ಷಕ ಹಣದ ಅಸಲಿಯತ್ತು ನನಗೂ ಗೊತ್ತು. ಈಗ ಹೇಳಿ, ಉಂಡ ಮನೆಗೆ ಮೂರು ಬಗೆದ ನೈಜ ಕಳ್ಳ ಯಾರು? Mr. ಸುಳ್ಳುರಾಮಯ್ಯ, ದಿನಕ್ಕಿಷ್ಟು ಸುಳ್ಳು, ಕ್ಷಣಕ್ಕೊಂದು ಪೊಳ್ಳು. ನೀವು ರಾಜಕೀಯ ಊಸರವಳ್ಳಿ ಅಂತ ಕುಮಾರಸ್ವಾಮಿ ಗುಡುಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

HDK ವಿರುದ್ಧ ಡಿಕೆಸಿ ಗುಡುಗು