Select Your Language

Notifications

webdunia
webdunia
webdunia
webdunia

ಅಶ್ವತ್ ನಾರಾಯಣ್​ ವಿರುದ್ಧ ‘ಕೈ’ ಪ್ರತಿಭಟನೆ

Hands-on protest against Ashwath Narayan
bangalore , ಬುಧವಾರ, 4 ಮೇ 2022 (19:32 IST)
ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಆರೋಪಕ್ಕೆ ಗುರಿಯಾಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್​ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‍ನಿಂದ ಮಲ್ಲೇಶ್ವರಂನಲ್ಲಿಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಲ್ಲೇಶ್ವರಂ ಆಟದ ಮೈದಾನದಿಂದ ಸಚಿವ ಅಶ್ವಥ್ ನಾರಾಯಣ ಅವರ ಕಚೇರಿವರೆಗೂ ಕಾಂಗ್ರೆಸ್ ಶಾಸಕರಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಇದೇ ವೇಳೆ ಎನ್‍ಎಸ್‍ಯುಐ ಕಾರ್ಯಕರ್ತರು ಅಶ್ವಥ್ ನಾರಾಯಣ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಅಶ್ವಥ್ ನಾರಾಯಣ ಅವರ ಸೋದರ 80 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಕೂಡಲೇ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ ಸಿಎಂ ಮೀಟ್​ ಮಾಡಿದ ಯಶ್