Select Your Language

Notifications

webdunia
webdunia
webdunia
Saturday, 12 April 2025
webdunia

ಶ್ರೀಲಂಕಾದಲ್ಲಿ ಹಿಂಸಾಚಾರಕ್ಕೆ 5 ಬಲಿ: 225 ಮಂದಿಗೆ ಗಾಯ

Sri Lanka Violence Protest ಪ್ರತಿಭಟನೆ ಶ್ರೀಲಂಕಾ ಹಿಂಸಾಚಾರ
bengaluru , ಮಂಗಳವಾರ, 10 ಮೇ 2022 (14:19 IST)
ಆರ್ಥಿಕ ದಿವಾಳಿತನದ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಹಿಂಸಾಚಾರ ಮುಂದುವರಿದಿದ್ದು, 5 ಮಂದಿ ಮಂದಿ ಮೃತಪಟ್ಟಿದ್ದು, 225ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ.
ಕೆಲವು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆ ಕಡಿಮೆ ಆಗುವ ಸೂಚನೆ ಕಂಡು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮಹಿಂದ ರಾಜಪಕ್ಸ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಹೊರತಾಗಿಯೂ ಪ್ರತಿಭಟನೆಯ ತೀವ್ರತೆ ಕಡಿಮೆಯಾಗುವ ಸೂಚನೆ ಕಂಡು ಬರುತ್ತಿಲ್ಲ.
2.2 ಕೋಟಿ ಜನಸಂಖ್ಯೆ ಹೊಂದಿರುವ ಶ್ರೀಲಂಕಾದಲ್ಲಿ ಆಹಾರ ಮತ್ತಿತರ ಮೂಲಭೂತ ಸೌಕರ್ಯ ಕುಸಿದಿದ್ದು, ಜನರು ಸರಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಏಪ್ರಿಲ್‌ ೯ರಂದು ಸರಕಾರದ ವಿರುದ್ಧ ಪ್ರತಿಭಟನೆ ಆರಂಭವಾಗಿದ್ದು, ಸರಕಾರಿ ಆಸ್ತಿಪಾಸ್ತಿಗೆ ನಷ್ಟವುಂಟು ಮಾಡಿದ್ಧಾರೆ.
ಸೋಮವಾರ ರಾತ್ರಿ ಮಾಜಿ ಸಚಿವರ ಮನೆಗೆ ಬೆಂಕಿ ಹಚ್ಚಿದ್ದರೆ, ಸಚಿವರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಜೂನ್‌ 3ಕ್ಕೆ 7 ಸ್ಥಾನಕ್ಕೆ ವಿಧಾನ‌ ಪರಿಷತ್ ಚುನಾವಣೆ ದಿನಾಂಕ ಘೋಷಣೆ!