Publish Date: Tue, 10 May 2022 (11:28 IST)
Updated Date: Tue, 10 May 2022 (11:30 IST)
ಭುವನೇಶ್ವರ : ಸಂಸಾರದ ತೊಂದರೆ ಸರಿಪಡಿಸುವ ನೆಪದಲ್ಲಿ ಮಾಂತ್ರಿಕನೊಬ್ಬ ವಿವಾಹಿತ ಮಹಿಳೆಯ ಮೇಲೆ 79 ದಿನ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.
ತನ್ನ ಅತ್ತೆಯೇ ಜ್ಯೋತಿಷಿಯೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿ, ಸಂತ್ರಸ್ತ ಮಹಿಳೆ ಮಾಂತ್ರಿಕ, ಪತಿ ಮತ್ತ ಆತನ ಪೋಷಕರು ಹಾಗೂ ಕಿರಿಯ ಸಹೋದರನ ವಿರುದ್ಧ ಜಲೇಶ್ವರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿ ಜ್ಯೋತಿಷಿಯನ್ನು ಎಸ್ಕೆ ತರಫ್ ಎಂದು ಗುರುತಿಸಲಾಗಿದೆ. ಮಹಿಳೆ ನೀಡಿದ ದೂರಿನ ಅನ್ವಯ, ಜ್ಯೋತಿಷಿ ತನ್ನ ಮೇಲೆ 79 ದಿನಗಳ ಕಾಲ ಅತ್ಯಾಚಾರ ಎಸಗಿದ್ದಾನೆ. ಬಾಲಸೋರ್ನ ಭೋಗ್ರಾಯ್ ಬ್ಲಾಕ್ನ ಕಖಾರಾ ಗ್ರಾಮದ ಈತ ಮಯೂರ್ಭಂಜ್ ಜಿಲ್ಲೆಯ ಬೈಂಚ್ಡಿಹಾ ಗ್ರಾಮದಲ್ಲಿ ವಾಮಾಚಾರ ಅಭ್ಯಾಸ ಮಾಡುತ್ತಿದ್ದಾನೆ ಎಂದು ದುರಿನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳೆಯು 2017ರಲ್ಲಿ ತನ್ನ ಮದುವೆಯಾದಾಗಿನಿಂದ, ಅತ್ತೆಯೊಂದಿಗೆ ತೊಂದರೆ ಎದುರಿಸುತ್ತಿದ್ದಳು. ಆಕೆಯ ಅತ್ತೆ ತನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು. ಈ ಬಗ್ಗೆ ಪತಿಗೆ ಹೇಳಿದರೂ ಕಿವಿಗೊಡುತ್ತಿರಲಿಲ್ಲ. ಇತ್ತೀಚೆಗೆ, ತನ್ನ ಪತಿ ಅಂಗಡಿ ಪ್ರಾರಂಭಿಸಲು ಬೇರೆ ನಗರಕ್ಕೆ ತೆರಳಿದ್ದರು.
ಈ ವೇಳೆ ಅತ್ತೆ ನನ್ನನ್ನು ಓರ್ವ ಮಾಂತ್ರಿಕನ ಬಳಿಗೆ ಕರೆದೊಯ್ದರು. ಅವನು ತನ್ನ ವೈವಾಹಿಕ ಸಮಸ್ಯೆಗಳನ್ನು ಪರಿಹರಿಸುತ್ತಾನೆ ಎಂದೂ ಭರವಸೆ ಮೂಡಿಸಿದ್ದರು. ಆದರೆ ಮಹಿಳೆ ಕೆಲವು ದಿನಗಳವರೆಗೆ ಅವನ ಸ್ಥಳದಲ್ಲಿ ಇರಬೇಕಾಗುತ್ತದೆ ಎಂದು ಹೇಳಿ. ಆಕೆಯ ವಿರೋಧವಿದ್ದರೂ ಮಾಂತ್ರಿಕನೊಂದಿಗೆ ಬಿಡಲಾಯಿತು. ಈ ವೇಳೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.