Publish Date: Thu, 12 May 2022 (12:45 IST)
Updated Date: Thu, 12 May 2022 (12:48 IST)
ರಾಜ್ಯದಲ್ಲಿ ಮಂಗಳವಾರ 129 ಮಂದಿಯಲ್ಲಿ ಕೋವಿಡ್-19 ದೃಢಪಟ್ಟಿದೆ. 128 ಮಂದಿ ಚೇತರಿಸಿಕೊಂಡಿದ್ದಾರೆ.
ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ.13,542 ಮಂದಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು ಶೇ.0.95 ಪಾಸಿಟಿವಿಟಿ ದರ ದಾಖಲಾಗಿದೆ. ಕಳೆದ ಮೂರು ದಿನಗಳಿಂದ ಶೇ.1ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ವರದಿ ಆಗಿರುವುದರಿಂದ ವಾರದ ಪಾಸಿಟಿವಿಟಿ ದರ ಶೇ.1.15ಕ್ಕೆ ಕುಸಿದಿದೆ.
ಬೆಂಗಳೂರು ನಗರದಲ್ಲಿ 121, ಮೈಸೂರು, ದಕ್ಷಿಣ ಕನ್ನಡದಲ್ಲಿ ತಲಾ ಇಬ್ಬರು, ಬಾಗಲಕೋಟೆ, ಚಿತ್ರದುರ್ಗ, ಹಾಸನ ಮತ್ತು ಉತ್ತರ ಕನ್ನಡದಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಈವರೆಗೆ 39.48 ಲಕ್ಷ ಮಂದಿಯಲ್ಲಿ ಕೋವಿಡ್ ಸೋಂಕು ತಗುಲಿದ್ದು,39.06 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ.
1,926 ಮಂದಿಯಲ್ಲಿ ಸಕ್ರಿಯ ಪ್ರಕರಣಗಳಿವೆ. 40,063 ಮಂದಿ ಮರಣವನ್ನಪ್ಪಿದ್ದಾರೆ. ನಗರದಲ್ಲಿ ಸೋಮವಾರ 88 ಮಂದಿಯಲ್ಲಿ ಕೋವಿಡ್ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.1.50ಕ್ಕೆ ಇಳಿಕೆಯಾಗಿದೆ. 122 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್ ಸಾವು ದಾಖಲಾಗಿಲ್ಲ.
ನಗರದಲ್ಲಿ ಒಟ್ಟು 1,805 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ತೀವ್ರ ನಿಗಾ ವಿಭಾಗದಲ್ಲಿ ಇಬ್ಬರು ಮತ್ತು ಸಾಮಾನ್ಯ ವಾರ್ಡ್ನಲ್ಲಿ ಐದು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆ ಆರೈಕೆಯಲ್ಲಿದ್ದಾರೆ.