Publish Date: Fri, 30 Mar 2018 (13:48 IST)
Updated Date: Fri, 30 Mar 2018 (14:04 IST)
ಪಾಪ ಮಾಜಿ ಪ್ರಧಾನಿ ಮನೋಹನ್ ಸಿಂಗ್ ಮಾತನಾಡುತ್ತಿರಲಿಲ್ಲ ಆದರೆ ಕೆಲಸ ಮಾಡುತ್ತಿದ್ದರು. ಈ ಮುಂಡೇದು ಬರಿ ಮಾತನಾಡುತ್ತಿದೆ ಹೊರತು ಕೆಲಸ ಮಾಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಗೆ ಸಿ.ಎಂ.ಇಬ್ರಾಹಿಂ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಭಾಷಣದಲ್ಲಿ ಕೇವಲ ಖಾಲಿ ದಿನ್, ಪರಿವರ್ತನ್ ಆಯೆಗೆ, ಅಚ್ಛೇ ದಿನ್ ಆಯೆಗೆ ಅಂತ ಹೇಳೋದೇ ಆಯ್ತು. ಆದರೇ ಅಚ್ಛೇ ದಿನ್ ಅರ್ಥವೇ ಬದಲಾಗಿದೆ. ತರಕಾರಿ ಮಾರುವ ಗಂಗಮ್ಮಗೆ ಡೆಬಿಟ್ ಕ್ರೆಡಿಟ್ ಕಾರ್ಡ್ ಕೊಟ್ರೆ ಎಲ್ಲಿ ಇಡಬೇಕು? ಮೀನು ಮಾರುವ ಹುಸೇನ್ ಸಾಬಿಗೆ ಕಾರ್ಡ್ ಕೊಟ್ರೆ ಮೀನಿನ ಬಾಯಲ್ಲಿ ಇಹಿಡೋಕೆ ಆಗುತ್ತಾ?
ದಯವೇ ಧರ್ಮದ ಮೂಲವಯ್ಯ ಅಂತ ಬಸವಣ್ಣ ಹೇಳಿದ್ದಾರೆ. ಆ ದಯೆ ತೋರಿರುವುದು ಸಿದ್ದರಾಮಯ್ಯ. ಆದರೆ ಪ್ರಧಾನಿ ಮೋದಿ ಮಾತ್ರ ಅಂಬಾನಿ ಹಾಗೂ ಅಮಿತ್ ಷಾ ಮಗನಿಗೆ ಅಚ್ಛೇ ದಿನ್ ಕೊಡುಗೆಯಾಗಿ ನೀಡಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.