Publish Date: Fri, 30 Mar 2018 (11:22 IST)
Updated Date: Fri, 30 Mar 2018 (11:33 IST)
ಮಂಡ್ಯ : ಮಂಡ್ಯ ಜಿಲ್ಲೆಯ ನಾಯಕತ್ವದ ಜೊತೆಗೆ ಟಿಕೆಟ್ ಹಂಚಿಕೆಯಲ್ಲಿ ತಮ್ಮನ್ನು ಪರಿಗಣಿಸಿಲ್ಲ ಎಂದು ಕಾಂಗ್ರೆಸ್ ನಾಯಕರ ಮೇಲೆ ನಟ ಅಂಬರೀಶ್ ಅವರು ಕೋಪಗೊಂಡಿರುವ ಹಿನ್ನಲೆಯಲ್ಲಿ ಮಂಡ್ಯ ವಿಧಾನಸಭೆ ಕ್ಷೇತ್ರದಿಂದಲ್ಲೇ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಖಚಿತಪಡಿಸಿದ್ದಾರೆ.
ನಾನಾಗಿಯೇ ಟಿಕೆಟ್ ಕೇಳಲ್ಲ ಎಂದಿದ್ದ ನಟ, ಮಾಜಿ ಸಚಿವ ಅಂಬರೀಶ್ ಅವರು ಅರ್ಜಿ ಹಾಕದಿದ್ದರೂ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಖಚಿತಪಡಿಸಿದ್ದಾರೆ. ಅಂಬರೀಶ್ ಅವರಿಗೆ ಟಿಕೆಟ್ ಕೊಡಬೇಕೋ, ಬೇಡವೋ ಎಂಬ ಗೊಂದಲದಲ್ಲಿದ್ದ ಹೈಕಮಾಂಡ್ ಅವರು ಇದೀಗ ಅಂಬರೀಶ್ ಅವರು ಬಂಡಾಯವೇಳುವ ಭೀತಿಯಿಂದ ಟಿಕೆಟ್ ಕನ್ಫರ್ಮ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅಂಬರೀಶ್ ‘ಕೈ’ ಬಿಟ್ಟರೆ ಮಂಡ್ಯದಲ್ಲಿ ಒಕ್ಕಲಿಗರ ವೋಟಿಗೆ ಏಟು ಬೀಳುವ ಭೀತಿಯಿಂದ ಹಾಗೂ ಕಾಂಗ್ರೆಸ್ ನಿಂದ ಬೇರೆ ಯಾರಿಗೇ ಟಿಕೆಟ್ ನೀಡಿದರೂ ಗೆಲುವು ಕಷ್ಟ ಎಂದು ಅರಿತ ಹೈಕಮಾಂಡ್ ಅಂಬರೀಶ್ ಅವರಿಗೆ ಮಣೆ ಹಾಕಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ