ಮಂಡ್ಯ : ನಿಮಗೆ ತಾಕತ್ತಿದ್ದರೆ ದಲಿತರನ್ನು ಮುಖ್ಯಮಂತ್ರಿ ಮಾಡಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ. 
									
			
			 
 			
 
 			
					
			        							
								
																	
ಮಳವಳ್ಳಿಯ ವಿಕಾಸಪರ್ವ ಯಾತ್ರೆಯಲ್ಲಿ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ ಅವರು,’ ಹಿರಿಯ ಕಾಂಗ್ರೆಸ್ಸಿಗರಾದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್ ಅವರನ್ನು ತುಳಿದು ಮುಖ್ಯಮಂತ್ರಿ ಆಗಿದ್ದೀರಾ, ನಿಮಗೆ ತಾಕತ್ತಿದ್ರೆ ದಲಿತರನ್ನು ಸಿಎಂ ಮಾಡಿ ಎಂದು ಸವಾಲ್ ಹಾಕಿದರು.
									
										
								
																	ಇಡೀ ರಾಜ್ಯದಲ್ಲಿ ದಲಿತರು ಬೀದಿಗಿಳಿದು ಪ್ರತಿಭಟಿಸಿದರೂ ಕ್ಯಾರೇ ಎನ್ನಲಿಲ್ಲ. ಪರಮೇಶ್ವರ್ ಕೇವಲ ಸಚಿವರನ್ನಾಗಿ ಮಾಡಲು ಕಣ್ಣೀರು ಹಾಕಿಸಿರುವ ನೀವು ನಮಗೆ ಬುದ್ಧಿವಾದ ಹೇಳ್ತೀರಾ ನಾಚಿಕೆಯಾಗಬೇಕು ನಿಮಗೆ ಎಂದು ತರಾಟೆಗೆ ತೆಗೆದುಕೊಂಡರಲ್ಲದೇ ವಲಸಿಗರಿಂದ ಕಾಂಗ್ರೆಸ್ ಪಕ್ಷ ಹೈಜಾಕ್ ಆಗಿದ್ದು, ಮೂಲ ಕಾಂಗ್ರೆಸ್ ನಾಯಕರ ಮೂಲೆ ಗುಂಪು ಮಾಡಲಾಗುತ್ತಿದೆ. ಕಾಂಗ್ರೆಸ್‌ನದ್ದು ನರಸತ್ತ ರಾಜಕಾರಣ’ ಎಂದು ವಾಗ್ದಾಳಿ ನಡೆಸಿದ್ದಾರೆ.   
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ