Publish Date: Tue, 27 Mar 2018 (10:10 IST)
Updated Date: Tue, 27 Mar 2018 (10:15 IST)
ಬೆಂಗಳೂರು: ರಾಜ್ಯ ಬಿಜೆಪಿಯ ಇಬ್ಬರು ಘಟಾನುಘಟಿ ನಾಯಕರಾದ ಈಶ್ವರಪ್ಪ – ಬಿಎಸ್ ಯಡಿಯೂರಪ್ಪ ನಡುವೆ ಕಿತ್ತಾಟ ಜನರಿಗೆ ಹೊಸದೇನೂ ಅಲ್ಲ. ಆದರೆ ಇದೀಗ ಇಬ್ಬರೂ ಒಂದಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಸ್ಪಷ್ಟಪಡಿಸಿದ್ದಾರೆ.
ಸಹೋದರರ ನಡುವೆ ಸಣ್ಣ ಪುಟ್ಟ ಗೊಂದಲಗಳು, ಮನಸ್ತಾಪಗಳು ಇರುವುದು ಸಹಜ. ಆದರೆ ಇದೀಗ ಇಬ್ಬರೂ ಹಳೆಯದನ್ನೆಲ್ಲಾ ಮರೆತು ಒಂದಾಗಿದ್ದಾರೆ. ಒಗ್ಗಟ್ಟಾಗಿದ್ದಾರೆ ಎಂದು ಮುರಳೀಧರ ರಾವ್ ಹೇಳಿದ್ದಾರೆ.
ರಾಜ್ಯ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಬ್ಬರಿಗೂ ಬುದ್ಧಿವಾದ ಹೇಳಿದ್ದು, ಚುನಾವಣೆ ಸಮಯದಲ್ಲಿ ಒಗ್ಗಟ್ಟಾಗಿ ಇರುವಂತೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ