Publish Date: Tue, 27 Mar 2018 (09:22 IST)
Updated Date: Tue, 27 Mar 2018 (09:28 IST)
ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದರೂ ಬಿಜೆಪಿಯಲ್ಲಿ ನಡೆಯುತ್ತಿರುವ ಭಿನ್ನಮತ ಚಟುವಟಿಕೆಗಳಿಂದ ಸಿಟ್ಟಿಗೆದ್ದಿರುವ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬಿಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಇಲ್ಲದ ರಗಳೆ ತಂದುಕೊಳ್ಳಬೇಡಿ ಎಂದು ಅಮಿತ್ ಶಾ, ನಿನ್ನೆ ರಾತ್ರಿ ಈಶ್ವರಪ್ಪ ಮನೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದಾಗ ಉಭಯ ನಾಯಕರಿಗೂ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಬಹಿರಂಗವಾಗಿ ಇಲ್ಲದ ಹೇಳಿಕೆ ನೀಡಬೇಡಿ. ವಿವಾದ ಸೃಷ್ಟಿಸಬೇಡಿ. ಈ ಚುನಾವಣೆಯ ಜವಾಬ್ದಾರಿ ನೀವು ಇಬ್ಬರೂ ನಾಯಕರದ್ದು. ಬಿಜೆಪಿ ಗೆಲ್ಲಿಸುವುದೇ ನಿಮ್ಮ ಗುರಿಯಾಗಿರಬೇಕು. ಇಲ್ಲದ ವಿಚಾರಗಳನ್ನು ಸೃಷ್ಟಿಸಿಕೊಳ್ಳಬೇಡಿ ಎಂದು ಶಾ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಶಾ ಸೂಚನೆಗೆ ಇಬ್ಬರೂ ನಾಯಕರು ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ