Publish Date: Tue, 27 Mar 2018 (07:04 IST)
Updated Date: Tue, 27 Mar 2018 (07:08 IST)
ಬಾಗಲಕೋಟೆ : 'ಕನ್ನಡ ಚಿತ್ರರಂಗದಲ್ಲಿ ನಟಿಮಣಿಗಳಿಗೆ ಹೊಸ ಅವಕಾಶ ಸಿಗಬೇಕು ಅಂದ್ರೆ ಮಂಚ ಏರಬೇಕೆನ್ನುವ ವಾತಾವರಣ ಇದ್ದೇ ಇದೆ. ಅದು ಇಲ್ಲ ಅಂತ ಹೇಳುವ ಧೈರ್ಯ ನನಗಿಲ್ಲ’ ಎಂದು ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಮಂಡ್ಯ ರಮೇಶ್ ಅವರು ಕಾರ್ಯಕ್ರಮವೊಂದರಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ’ಕನ್ನಡ ಚಿತ್ರರಂಗ ಸೇರಿದಂತೆ ತೆಲುಗು, ತಮಿಳು ಸೇರಿದಂತೆ ಭಾರತೀಯ ಚಿತ್ರರಂಗದ ಅನೇಕ ಕಡೆ ಹೊಸ ಅವಕಾಶಕ್ಕೆ ಮಂಚ ಏರಬೇಕೆನ್ನುವ ವಾತಾವರಣ ಇದ್ದೇ ಇದೆ. ಇಲ್ಲ ಅಂತ ಹೇಳುವ ಧೈರ್ಯ ನನಗಿಲ್ಲ. ಇದು ಎಲ್ಲಾ ಕಾಲದಿಂದಲೂ ಇದೆ. ಇದು ಬಹಳ ನೋವಿನ ಸಂಗತಿ’ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
‘ಇದೆಲ್ಲ ಜನರಿಗೆ ಗೊತ್ತಿದೆ. ಇದನ್ನೆಲ್ಲ ಮೀರಿ ಹೋಗುವಂತಹ ಸಾಹಸವನ್ನು ಹೊಸ ತಲೆಮಾರಿನ ಯುವಕ-ಯುವತಿಯರು ಮಾಡಬೇಕಿದೆ. ಇಂತಹ ಘಟನೆಗಳು ಇಲ್ಲದ ಕಾಲದಲ್ಲಿ ಚಿತ್ರರಂಗ ಇನ್ನಷ್ಟು ಆರೋಗ್ಯಪೂರ್ಣ ಆಗುತ್ತೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ