Publish Date: Fri, 30 Mar 2018 (13:43 IST)
Updated Date: Fri, 30 Mar 2018 (13:45 IST)
ದಾಖಲೆ ಇಲ್ಲದ ಚಿನ್ನಾಭರಣ, ನಗದು, ಇನೋವಾ ಕಾರ್ ವಶಪಡಿಸಿಕೊಳ್ಳಲಾಗಿದೆ. 429 ಗ್ರಾಂ ಬಂಗಾರ, ಒಂದೂವರೆ ಕೆಜಿ ಬೆಳ್ಳಿ ಹಾಗೂ ಒಂದು ಲಕ್ಷದ ಮೂರು ಸಾವಿರ ರೂಪಾಯಿ ನಗದು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕೋಟೂರು ಗ್ರಾಮದಿಂದ ಸವದತ್ತಿಗೆ ಹೊರಟಿದ್ದ ಪ್ರಶಾಂತ ನಿಕ್ಕಮ್‌ರನ್ನು ತೇಗೂರು ಗ್ರಾಮದ ಬಳಿ ತಪಾಸಣೆ ನಡೆಸಿ ಚಿನ್ನಾಭರಣ, ಇನೋವಾ, ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸವದತ್ತಿ ಪಟ್ಟಣದ ನಿವಾಸಿಯಾಗಿರುವ ಪ್ರಶಾಂತ್ ನಿಕ್ಕಮ್ ಎಂಬುವರು ದಾಖಲೆಯಿಲ್ಲದೇ ಚಿನ್ನಾಭರಣ ಸಾಗಿಸುತ್ತಿರುವ ಬಗ್ಗೆ ಗದಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.