Publish Date: Fri, 30 Mar 2018 (13:38 IST)
Updated Date: Fri, 30 Mar 2018 (13:40 IST)
ಮೈಸೂರು ಅರಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿ ನೀಡಿದ್ದಾರೆ. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಒಡೆಯರ್ ಜೊತೆ ಮಾತುಕತೆ ನಡೆಸಿದ್ದಾರೆ.
ಮೈಸೂರು ಅರಮನೆಯ ಖಾಸಗಿ ನಿವಾಸದಲ್ಲಿ ಈ ಮಾತುಕತೆ ನಡೆದಿದೆ. 10 ಮಂದಿ ಬಿಜೆಪಿ ನಾಯಕರೊಂದಿಗೆ ಅರಮನೆಗೆ ಅಮೀತ್ ಷಾ ಭೇಟಿ ನೀಡಿರುವುದು ಚುನಾವಣಾ ಸಂದರ್ಭದಲ್ಲಿ ಮಹತ್ವ ಪಡೆದುಕೊಂಡಿದೆ.
ಈಗಾಗಲೇ ರಾಜಕೀಯಕ್ಕೆ ಬರುವುದಿಲ್ಲ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ. ಅದರ ನಡುವೆಯೇ ಬಿಜೆಪಿ ಪರ ಪ್ರಚಾರಕ್ಕೆ ಯದುವೀರ್ ಅವರನ್ನು ಆಹ್ವಾನಿಸುವ ಸಾಧ್ಯತೆ ಹಿನ್ನಲೆಯಲ್ಲಿ ಭೇಟಿ ನೀಡಲಾಗಿದೆ ಎನ್ನಲಾಗುತ್ತಿರುವುದು ರಾಜ್ಯದ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ.
ಪ್ರಮೋದಾದೇವಿ ಒಡೆಯರ್, ಯದುವೀರ್ ಒಡೆಯರ್ ಅವರೊಂದಿಗೆ ಅರ್ಧ ಗಂಟೆಗಳ ಕಾಲ ಮಾತುಕತೆಯನ್ನು ಅಮಿತ್ ಷಾ ಅಂಡ್ ಟೀಮ್ ನಡೆಸಿದೆ.