Select Your Language

Notifications

webdunia
webdunia
webdunia
webdunia

ಸುತ್ತೂರು ಮಠಕ್ಕೆ ಸುತ್ತು ಹಾಕಿದ ಅಮಿತ್ ಶಾ

ಸುತ್ತೂರು ಮಠಕ್ಕೆ ಸುತ್ತು ಹಾಕಿದ ಅಮಿತ್ ಶಾ
ಮೈಸೂರು , ಶುಕ್ರವಾರ, 30 ಮಾರ್ಚ್ 2018 (10:35 IST)
ಮೈಸೂರು: ಮೈಸೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಮುಂಡಿ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ.
 

ಈ ಸಂದರ್ಭದಲ್ಲಿ ಶಾ ಜತೆಗೆ ಬಿಜೆಪಿ ರಾಜ್ಯ ನಾಯಕರಾದ ಯಡಿಯೂರಪ್ಪ,  ಅನಂತಕುಮಾರ್, ಸಿಟಿ ರವಿ ಮುಂತಾದವರು ಜತೆಗಿದ್ದರು. ಮಠಕ್ಕೆ ಬಂದ ಅಮಿತ್ ಶಾಗೆ ಶಾಲು ಹೊದಿಸಿ ಗೌರವಿಸಿದ ಸ್ವಾಮೀಜಿ ಜತೆ ಕೆಲ ಕ್ಷಣ ಮಾತುಕತೆ ನಡೆಸಿ ತೆರಳಿದ್ದಾರೆ.

ಇಂದು ಶಾ, ಮೈಸೂರು ಅರಮನೆ,  ಸಂಜೆ ನಂಜನಗೂಡು ಶ್ರೀಕಂಠ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೆ, ಎಸ್ ಟಿ ಸಮಾವೇಶದಲ್ಲೂ ಭಾಗವಹಿಸಲಿದ್ದಾರೆ. ಈ ಎಲ್ಲಾ ಸಂದರ್ಭದಲ್ಲಿ ಬಿಜೆಪಿ ನಾಯಕರು ಶಾಗೆ ಜತೆಯಾಗಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಕಾಶ್ ರೈಯನ್ನು ಕಾಂಗ್ರೆಸ್ ಗೆ ಕರೆತರಲು ಯತ್ನ